ABHAYA TALKIES

Entries categorized as ‘Daily Blog’

ಮತ್ತೆ ಹಾರುತಿದೆ ಗುಬ್ಬಿಗಳು…

October 25, 2009 · 16 Comments

Categories: Daily Blog

ನೀನು ಇದನ್ನು ಓದುತ್ತಿದ್ದರೆ ಇದು ನಿನಗಾಗಿ…

August 29, 2009 · 8 Comments

Richard (2)ಅದೇನೇನೋ ಕೆಲಸದಲ್ಲಿ ಮುಳುಗಿದ್ದರಿಂದ ಅನೇಕ ದಿನಗಳಿಂದ ಬ್ಲಾಗ್ ತುಂಬಿರಲಿಲ್ಲ. ಅಥವಾ ಹಂಚಿಕೊಳ್ಳಲು ಯೋಗ್ಯ ವಿಷಯವೂ ಇರಲಿಲ್ಲವೇನೋ. ಹೀಗಿದ್ದಾಗಲೇ ಒಂದು ಘಟನೆ ನಡೆದಿದೆ. ಅದ್ಯಾವುದೋ ಸಾಕ್ಷ್ಯ ಚಿತ್ರಕ್ಕಾಗಿ ನಾನು ಕೆಲವು ದಿನಗಳ ಹಿಂದೆ ನಾನು ಮಂಗಳೂರಿನಲ್ಲಿ ಚಿತ್ರೀಕರಣ ನಡೆಸುತ್ತಿದ್ದೆ. ಒಂದು ಸ್ಥಳದಲ್ಲಿ ಚಿತ್ರೀಕರಣ ಮುಗಿಸಿ ಮುಂದಿನ ಸ್ಥಾನವನ್ನು ತಲುಪಲು ರಿಕ್ಷಾ ಹತ್ತಿದೆ. ಮುಂದಿನ ಜಾಗದಲ್ಲಿ ಏನು ಚಿತ್ರೀಕರಿಸಿಕೊಳ್ಳಬೇಕು, ಹೇಗೆ ಎಂದಿತ್ಯಾದಿಯಾಗಿ ಯೋಚಿಸುತ್ತಾ ರಿಕ್ಷಾದ ಸುತ್ತ ಹಾದು ಹೋಗುತ್ತಿರುವ ಮಂಗಳೂರಿನ ಪೇಟೆಯನ್ನೇ ಅಲ್ಲಿನ ಅನೇಕ ಜನರನ್ನೇ ನೋಡಿತ್ತಾ ಮೌನವಾಗಿ ಕುಳಿತಿದ್ದೆ. ನಾನು ಹುಟ್ಟಿ ಬೆಳೆದ ಊರು ಇದು. ಐದು ವರುಷಗಳ ಹಿಂದೆ ನಾನೂ ಇಲ್ಲೇ ಇದ್ದೆ. ನನ್ನ ಕನಸುಗಳು, ಕಷ್ಟಗಳು ಇಲ್ಲೇ ಇದ್ದುವು ಎಂದು ಒಂದು ಕ್ಷಣಕ್ಕೆ ಅನಿಸಿತು. ಹೀಗೆ ಸುಮ್ಮನಿರುವ ಕಾಲದಲ್ಲಿ ಮನಸ್ಸಿನಲ್ಲಿ ಅಸಂಬದ್ಧ ಯೋಚನಾ ಸರಣಿ ಓಡುತ್ತಿತ್ತು ಮನಸ್ಸಲ್ಲಿ ಒಮ್ಮೊಮ್ಮೆ. ಆಗ ಒಂದು ಟ್ರಾಫಿಕ್ ಸಿಗ್ನಲ್ ಎದುರಾಯಿತು. ನಾನಿದ್ದ ರಿಕ್ಷಾವೂ ನಿಂತಿತು. ಹಾ! ಈ ಐದು ವರುಷಗಳಲ್ಲಿ ಇಲ್ಲಿ ಟ್ರಾಫಿಕ್ ಎಷ್ಟು ಹೆಚ್ಚಾಗಿದೆ! ಇಷ್ಟೊಂದು ಜನ ಎಲ್ಲಿಂದ ಬಂದರು ಎಂದು ಯೋಚಿಸುತ್ತಿದ್ದೆ. ಅಷ್ಟರಲ್ಲಿ ನಾನು ಕುಳಿತಿದ್ದ ರಿಕ್ಷಾದ ಚಾಲಕ ಹಿಂದಿರುಗಿ ನನ್ನನ್ನು ನೋಡಿ ಅದೇನೋ ತೊದಲಿದ…

(more…)

Categories: Daily Blog · Society

ಕಬ್ಬಿನ ತೋಟದಿ ಗುಬ್ಬಿಯ ಹಾರಾಟ…

May 22, 2009 · Leave a Comment

ಸ್ನೇಹಿತರೇ, ಗುಬ್ಬಚ್ಚಿಗಳು ಚಲನ ಚಿತ್ರವು ಮಂಡ್ಯದಲ್ಲಿ ಪ್ರದರ್ಶನಗೊಳ್ಳಲಿದೆ.

Gubbachigalu

ಇದೇ ತಿಂಗಳ ಮೂವತ್ತರಂದು (30, ಮೇ, 2009)

ಮಂಡ್ಯದಲ್ಲಿನ ಚಿತ್ರ ಸಮುದಾಯವೊಂದರಲ್ಲಿ ಪ್ರದರ್ಶನ ನಡೆಯಲಿದೆ.
ಪ್ರದರ್ಶನದ ನಂತರ ನಿರ್ಮಾಪಕ – ಬಿ. ಸುರೇಶ, ನಿರ್ದೇಶಕ – ಅಭಯ ಸಿಂಹ ಹಾಗೂ ಖ್ಯಾತ ಚಿತ್ರ ನಿರ್ದೇಶಕ ನಾಗತಿ ಹಳ್ಳಿ ಚಂದ್ರಶೇಖರ್ ಮಾತುಕತೆಗೆ ಸಿಗಲಿದ್ದಾರೆ ಎಂದು ಮಂಡ್ಯ ಚಿತ್ರ ಸಮುದಾಯದ ಸಂಚಾಲಕರಾದ ಶ್ರೀ ವಿನಯ್ ಅವರು ತಿಳಿಸಿದ್ದಾರೆ. ಸಂಜೆ ಐದು ಗಂಟೆಗೆ ಪ್ರದರ್ಶನ ಆರಂಭವಾಗಲಿದೆ. ಆಸಕ್ತರು ಭಾಗವಹಿಸಬಹುದು.

ವಿ.ಸೂ: ಪ್ರಿಯರೇ… ಮೇಲಿನ ಬರವಣಿಗೆ ಸ್ವಲ್ಪ ವರದಿಯ ಮಟ್ಟಿಗೆ ಇರುವುದಕ್ಕೆ ಕ್ಷಮೆ ಇರಲಿ. ಹಾಗೆ ಬರೆದರೆ ಸ್ವಲ್ಪ ಹೆಚ್ಚು ಅನುಕೂಲ ಎನಿಸಿತು ಅದಕ್ಕೆ ಹೀಗೆ…

Categories: Daily Blog

ಝೂಝೂ

May 13, 2009 · 3 Comments

ಟೆಲಿವಿಷನ್ ಜಾಹಿರಾತುಗಳಲ್ಲಿ ಹೊಸತನವನ್ನು ತಂದುಕೊಟ್ಟ ವೊಡಾಫೋನ್ ಜಾಹಿರಾತುಗಳ ಮಾಲಿಕೆಯಲ್ಲಿ ಹೊಸ ಕೊಡುಗೆ  ‘ಝೂಝೂ’ ಎಂಬ ಪಾತ್ರ ಎಲ್ಲೆಡೆ ಜನರ ಮೆಚ್ಚುಗೆ ಗಳಿಸುತ್ತಿದೆ. ಅದರ ಒಂದಷ್ಟು ಸಂಗ್ರಹ ಇಲ್ಲಿ ನಿಮಗಾಗಿ. ನನಗೂ ತುಂಬಾ ಸಂತೋಷಕೊಟ್ಟ ಜಾಹಿರಾತುಗಳು ಇವು. ನೀವೂ ನೋಡಿ ಸಂತೋಷಪಡಿ.
- ಅಭಯ

(more…)

Categories: Daily Blog