ಚಂದ್ರಾಕೊ ಪಕಡ್ನಾ ಮುಶ್ಕಿಲ್ ಹೀ ನಹೀ ನಾಮುಮ್ಕಿನ್ ಹೈ.

ಚಂದ್ರಾ ಬೇರಟ್ ಹೆಸರು ಎಲ್ಲಾದರೂ ನೆನಪಾಗುತ್ತಾ? ಕಷ್ಟವೇ? ಇರಲಿ ನಾನೇ ಹೇಳ್ತೇನೆ. ಅಮಿತಾಬ್ ಬಚ್ಚನ್ ಎಂಬ ಹುಡುಗನನ್ನು ಇಟ್ಟುಕೊಂಡು ಡಾನ್ ಎಂಬ ಚಿತ್ರವನ್ನು ನಿರ್ದೇಶಿಸಿದ ಚಿತ್ರ ನಿರ್ದೇಶಕ ಇವರು. ಅವತ್ತಿನ ಕಾಲದಲ್ಲಿನ ಸ್ಟೈಲ್ ಸ್ಟೇಟ್ಮೆಂಟ್ ಆಗಿದ್ದ ವ್ಯಕ್ತಿ. ಜೀನತ್ ಅಮಾನರನ್ನು ತನ್ನ ಗರ್ಲ್ ಫ್ರಂಡ್ ಆಗಿದ್ದಳು. ಮದುವೆಯೂ ಆಗಬೇಕಿತ್ತು ನಾನು ಆಕೆಯನ್ನು ಎಂದು ಹೇಳಿಕೊಳ್ಳುವವರು ಈ ವ್ಯಕ್ತಿ. ಇವರನ್ನು ಇತ್ತೀಚೆಗೆ ಅಕಸ್ಮತ್ತಾಗಿ ಮುಂಬೈನಲ್ಲಿ ಒಂದು ಆಪ್ತ ಭೇಟಿಯಲ್ಲಿ ಮಾತನಾಡಿಸುವ ಅವಕಾಶ ಸಿಕ್ಕಿತ್ತು ನನಗೆ. ಎಪ್ಪತ್ತರ ದಶಕದಲ್ಲೇ ಮುಂಬೈಯಲ್ಲಿ ಸ್ಪೋರ್ಟ್ಸ್ ಕಾರು ಇಟ್ಟುಕೊಂಡು ಓಡಾಡುತ್ತಿದ್ದ ವ್ಯಕ್ತಿ, ಮುಂಬೈಯಲ್ಲಿ ಇದ್ದ ಕೇವಲ ಮೂರು ವಿ.ಸಿ.ಆರ‍್ ಗಳಲ್ಲಿ ಒಂದರ ಮಾಲಿಕರಾಗಿದ್ದವರು! ಹೀಗೆ ಆ ಕಾಲದ ಅವರ ನೆನಪಿನ ಸುರುಳಿಗಳು ಬಿಚ್ಚಿಕೊಂಡದ್ದು ನಮ್ಮ ಮಾತುಕಥೆಯ ಸಂದರ್ಭದಲ್ಲಿ. ಇದರ ಕುರಿತಾಗಿ ಒಂದಿಷ್ಟು ನಿಮ್ಮೊಂದಿಗೂ ಹಂಚಿಕೊಳ್ಳುವೆ.

More

ಗುಬ್ಬಚ್ಚಿಗಳಿಲ್ಲದ ಮತ್ತೆದೇ ಬೇಸರದ ಬೆಳಗು

ನಾನು ನಿರ್ದೇಶಿಸಿದ ‘ಗುಬ್ಬಚ್ಚಿಗಳು’ ಚಿತ್ರಕ್ಕೆ ರಾಷ್ಟ್ರಪ್ರಶಸ್ತಿ ಬಂತು. ಅನೇಕ ಕಡೆ ಚಿತ್ರಪ್ರದರ್ಶನಗಳಾದವು, ಸನ್ಮಾನಗಳಾದವು, ಜನ ಮಾತನಾಡಿದರು, ತಮ್ಮ ಮನೆಗಳಲ್ಲಿ ಇದ್ದ ಗುಬ್ಬಚ್ಚಿಗಳನ್ನು ನೆನೆದರು, ಅವುಗಳೊಂದಿಗಿನ ಸವಿ ನೆನಪುಗಳನ್ನು ಮೆಲುಕು ಹಾಕಿದರು. ಎಲ್ಲಾ ಆದರೂ ಎಲ್ಲೋ ಒಂದೆಡೆ ನಮ್ಮ ಚಿತ್ರ ಗುಬ್ಬಚ್ಚಿಗಳ ಅಳಿವಿನ ನಂತರದ ಸಂತಾಪಸೂಚಕ ಸಭೆಗೆ ಕಾರಣವಾಗುತ್ತಿದೆಯೇ ಎಂಬ ಆತಂಕವೂ ನನಗಾಗುತ್ತಿತ್ತು. ಇದೇ ಸಂದರ್ಭದಲ್ಲಿ ವಿಶ್ವ ಗುಬ್ಬಚ್ಚಿ ದಿನಾಚರಣೆ (ಮಾರ್ಚ್ ೨೦) ಸಂದರ್ಭಕ್ಕೆ ಒಂದು ಬರವಣಿಗೆ ಕೊಡಲು ಗುರುಗಳಾದ ಜಿ.ಎನ್. ಮೋಹನ್ನರು ಹೇಳಿದಾಗ ಗುಬ್ಬಚ್ಚಿಗಳು ಚಿತ್ರದ ಹಿನ್ನೆಲೆಯನ್ನು ಬರೆಯುವ ಮನಸ್ಸಾಯಿತು.

ಈ ಇಡೀ ಪಯಣ ಆರಂಭವಾಗಿದ್ದು ಒಂದು ಸಂಜೆ ಹಿರಿಯ ಸ್ನೇಹಿತರಾದ ಇಸ್ಮಾಯಿಲ್ ಹಾಗೂ ಪರಮೇಶ್ ಗುಂಡ್ಕಲ್ ಜೊತೆ ಅದೇನೋ ಮಾತನಾಡುತ್ತಿದ್ದಾಗ. ಇಸ್ಮಾಯಿಲರು ಸ್ವಲ್ಪ ಸಮಯ ಹಿಂದೆಯೇ ಬೆಂಗಳೂರಿನಲ್ಲಿ ಇರುವ ಹಕ್ಕಿಗಳ ಬಗ್ಗೆ ಅದೇನೋ ಲೇಖನ ಮಾಡಲು ಹೊರಟವರಿಗೆ ಬೆಂಗಳೂರಿನಲ್ಲಿ ಕಡಿಮೆಯಾಗುತ್ತಿರುವ ಗುಬ್ಬಚ್ಚಿಗಳ ಸಂಖ್ಯೆಯ ಅರಿವಾಯಿತು. ಅದನ್ನು ಒಂದು ಕಥೆಯಾಗಿ ಬರೆಯಬೇಕೆಂದು ಅವರು ಅಂದುಕೊಂಡಿದ್ದರು. ಅಂದು ಆ ಕಥೆಯನ್ನು ಇಸ್ಮಾಯಿಲ್ ನನಗೆ ಹೇಳಿದರು. ಆ ಕಥೆಯನ್ನು ಚಿತ್ರಕಥೆಯನ್ನಾಗಿಸಿ ಒಂದು ಚಿತ್ರವನ್ನು ಮಾಡಬೇಕು ಎಂದು ನಾವು ನಿರ್ಧರಿಸಿದೆವು.

More

National Awards.

Dear Friends,

You already know that my first film Gubbachigalu won the National Award for the Best Childrens Film 2008. on 19th March, 2010 President of India, Mrs. Pratibha Patil will be conferring the honors to Shylaja Nag and my self in Vijyan Bhavan, Delhi. There will be a live telecast of the same in Doordarshan’s national channel. If you have time, please watch it and support us. We thank you for your kind support so far for the journey of Gubbachigalu.

- Abhaya Simha and entire team of Gubbachigalu.

ಸ್ನೇಹಿತರೇ,

ಗುಬ್ಬಚ್ಚಿಗಳು ಚಿತ್ರಕ್ಕೆ ರಾಷ್ಟ್ರ ಪ್ರಶಸ್ತಿ ಬಂದಿರುವುದು ನಿಮಗೆಲ್ಲರಿಗೂ ತಿಳಿದಿರುವ ವಿಷಯವೇ ಆಗಿದೆ. ಹತ್ತೊಂಭತ್ತನೇ ತಾರೀಕಿನಂದು ದೆಹಲಿಯ ವಿಜ್ಞಾನ ಭವನದಲ್ಲಿ ರಾಷ್ಟ್ರಪತಿ ಶ್ರೀಮತಿ ಪ್ರತಿಭಾ ಪಾಟೀಲ್ ಅವರು ನಿರ್ಮಾಪಕರಾದ ಶೈಲಜಾ ನಾಗ್ ಹಾಗೂ ನನಗೆ ರಾಷ್ಟ್ರಪತಿ ಪ್ರಶಸ್ತಿ ಪ್ರಧಾನ ಮಾಡಲಿದ್ದಾರೆ. ಇದರ ನೇರ ಪ್ರಸಾರ ದೂರದರ್ಶನದ ರಾಷ್ಟ್ರೀಯ ಪ್ರಸರಣದಲ್ಲಿ ಸಂಜೆ ಸುಮಾರು ಐದು ಗಂಟೆಯ ನಂತರ ಆರಂಭವಾಗಲಿದೆ. ಸಮಯಾವಕಾಶ ಇದ್ದಲ್ಲಿ, ದಯವಿಟ್ಟು ನೋಡಿ, ಬೆಂಬಲಿಸಿ. ಗುಬ್ಬಚ್ಚಿಗಳ ಈವರೆಗಿನ ಪಯಣಕ್ಕೆ ಸಹಕರಿಸಿದ ನಿಮಗೆಲ್ಲರಿಗೂ ಧನ್ಯವಾದಗಳು.

- ಅಭಯ ಸಿಂಹ ಹಾಗೂ ಗುಬ್ಬಚ್ಚಿಗಳು ಚಿತ್ರ ತಂಡ

Lift-nza to home!

[20 February 2010]

Today was the last day here in Berlin. We were free for most of the day. I didn’t even have any film ticket for the day. So I took time in sending some mails to India, and then took real long time to pack everything as there were lots of books, catalogues, cards that I had collected during my stay in Berlin. Had to sort them out, leave some things behind. By the time I finished everything, it was about 12 and we were supposed to meet for lunch by 12:30 at the hotel lobby. Since these were the last chances to get together as a group before we leave for our own countries, I didn’t want to miss it.

More

Previous Older Entries Next Newer Entries