ಯಾವುದೇ ಒಂದು ಕಥಾ ವಸ್ತುವಿನೊಂದಿಗೆ ಒಂದು ಮಾಧ್ಯಮ ಬಹಳ ಕಾಲ ಚೆಲ್ಲಾಟವಾಡಿದರೆ, ಅದು ಅದರಲ್ಲೇ ಪ್ರಬುದ್ಧತೆಯನ್ನು ಪಡೆಯಬಹುದೇ? ಭಾರತದಲ್ಲಿ ಆರ್ಟ್ ಸಿನೆಮಾ ಎಂದು ಕರೆಸಿಕೊಳ್ಳುವ ಚಿತ್ರಗಳು, ನಮ್ಮ ಒಂದು ಸಾಮಾನ್ಯ ವಿಷಯವಾದ ಬಡತನವನ್ನು (ಅನೇಕ ಇವೆ. ಅದರಲ್ಲಿ ಇದೊಂದನ್ನು ಮಾತ್ರ ನಾನು ಮಾತನಾಡುತ್ತಿದ್ದೇನೆ. ಉಳಿದದ್ದಕ್ಕೂ ಸಮೀಕರಿಸಿ ನೋಡಿಕೊಳ್ಳಬಹುದು ಇದೇ ವಾದವನ್ನು) ಹಸಿವನ್ನು ಬಳಸಿಕೊಂಡಿರುವ ರೀತಿಯಲ್ಲಿ ನಾವು ಈ ಪ್ರಬುದ್ಧತೆಯನ್ನು ಕಾಣುತ್ತೇವೆಯೇ? ಈ ಪ್ರಶ್ನೆ ನನಗೆ ಉದಯಿಸಿದ್ದು ಇತ್ತೀಚೆಗೆ ನಾನು ನೋಡಿದ ಒಂದು ಹಾಲಿವುಡ್ ಸಿನೆಮಾದಿಂದ. ಆ ಚಿತ್ರದ ಹೆಸರು ಡಿಸ್ಟ್ರಿಕ್ಟ್ ೯. ಅಮೇರಿಕದ ಚಿತ್ರರಂಗದಲ್ಲಿ ಬಡತನ, ಹಸಿವು, ಕಾಮ ಇತ್ಯಾದಿಗಳನ್ನು ಮೀರಿದ ಒಂದು ತುಡಿತವನ್ನು ನಾವು ಹಲವು ಬಾರಿ ಕಾಣುತ್ತೇವೆ. ಅವರಿಗೆ ಇಹ ಲೋಕ ಬಿಟ್ಟು ಬಾಹ್ಯ ಲೋಕದ ಕುರಿತಾಗಿ ಇರುವ ಕುತೂಹಲ ಅದು. ಬಾಹ್ಯ ಲೋಕದ ಜೀವಿಗಳ ಚಿತ್ರಗಳ ಸರಣಿಯೇ ಅಲ್ಲಿವೆ. ಇಟಿ ಇರಬಹುದು, ಇನ್ಡಿಪೆಂಡೆನ್ಸ್ ಡೇ ಇರಬಹುದು, ಮೆನ್ ಇನ್ ಬ್ಲಾಕ್ ಇರಬಹುದು… ಹೀಗೆ ಅನೇಕ ಚಿತ್ರಗಳ ಪಟ್ಟಿ ನಿಮ್ಮ ಬಳಿಯೂ ಖಂಡಿತಾ ಇದೆ. ಇವೆಲ್ಲವುಗಳಿಗಿಂತ ಭಿನ್ನವಾಗಿ ಈ ಚಿತ್ರ ನಿಲ್ಲುತ್ತದೆ. ಇದು ನನಗೆ ಕುತೂಹಲವನ್ನು ಮೂಡಿಸಿದ್ದರಿಂದ ನಾಲ್ಕು ಮಾತು ಇಲ್ಲಿ…
Entries categorized as ‘Film reviews’
District 9
September 29, 2009 · 4 Comments
Categories: Film reviews
ಅಗ್ಯಾತವಾಗಿರುವ ರಾಜ್‍ಕೀಯಗಳು
September 6, 2009 · 4 Comments
ಅಬ್ಬಾ! ಒಂದು ವಿಚಿತ್ರ ಸನ್ನಿವೇಷದಲ್ಲಿ ಸಿಕ್ಕಿ ಪ್ರಿಯಾಂಕಾ ಕೊಠಾರಿಯ ಎರಡು ಸಿನೆಮಾಗಳನ್ನು ಸತತ ಎರಡು ದಿನ ನೋಡಬೇಕಾಯಿತು ನನಗೆ. ಮೊದಲನೆಯ ಚಿತ್ರ ಕನ್ನಡದ್ದೇ ಚಿತ್ರ, ರಾಜ್ the show man! ಎರಡನೆಯದು ಮರುದಿನ ನೋಡಿದ ಚಿತ್ರ, ರಾಮ್ ಗೋಪಾಲ್ ವರ್ಮಾರ ಅಗ್ಯಾತ್. ಎರಡೂ ಚಿತ್ರಗಳು ಸಾಕಷ್ಟು ತಲೆ ತಿಂದವು ಹಾಗೂ ಒಂದಷ್ಟು ಪ್ರಶ್ನೆಗಳನ್ನು ಹುಟ್ಟು ಹಾಕಿದವು. ಒಂದು ಚಿತ್ರ ನಿರ್ಮಿಸಬೇಕಾದರೆ ಅನೇಕ ತಂತ್ರಜ್ಞಾನ, ಕಲಾವಿದರು ಒಟ್ಟಾಗಿ ಕೆಲಸ ಮಾಡುವುದು ಅನಿವಾರ್ಯ. ಆದರೆ ಇವುಗಳ ನಡುವೆ ಒಂದು ಸಾಮರಸ್ಯ ಅಗತ್ಯ. ಹೀಗಿರುವಾಗ, ಈ ಸಾಮರಸ್ಯ ಹಾಳಾದರೆ ಏನಾಗುತ್ತದೆ? ಮನುಷ್ಯನ ದೇಹದಲ್ಲಿ ಎಡಗಾಲು ತಾನು ಬಲಗಾಲಿಗಿಂತ ಶ್ರೇಷ್ಟ ಎಂದು ಕೊಂಡರೆ ಹೇಗಿರುತ್ತದೆ? ಇನ್ನು ಇಡೀ ಚಿತ್ರವನ್ನು ಪ್ರಚಾರ ಮಾಡಲಿಕ್ಕೆಂದು ಅದರ ಒಂದು ಭಾಗವನ್ನು ಹೇಳಿ ಆಡಿಕೊಳ್ಳುವುದರಲ್ಲಿ ಎಂಥಾ ರಾಜಕೀಯ ಇದೆ?! ಇನ್ನು ನೂರು ಜನ ಬೆತ್ತಲಿರುವಾಗ ಒಬ್ಬನ ಬೆತ್ತಲೆಯ ಕುರಿತಾಗಿ ಮಾಧ್ಯಮಗಳು ಮಾತನಾಡುವುದರ ಹಿಂದಿನ ರಾಜಕೀಯ ಏನು? ಹೀಗೆ ಪ್ರಶ್ನೆಗಳು ನನ್ನ ತಲೆಯಲ್ಲಿ. ಅದನ್ನು ನಿಮ್ಮ ತಲೆಗೆ ದಾಟಿಸಲು ಕುಳಿತಿದ್ದೇನೆ ಇಲ್ಲಿ.
Categories: Film reviews
ಪೋಪರಿಗೊಂದು ಶೌಚಾಲಯವ ಕಟ್ಟಿ
August 9, 2009 · 1 Comment
ಒಂದಾನೊಂದು ಕಾಲದಲ್ಲಿ ಅಂದರೆ ೧೯೮೮ರಲ್ಲಿ ಬ್ರೆಜಿಲ್ಲಿನಲ್ಲಿ ಒಂದು ಪುಟ್ಟ ಹಳ್ಳಿಯಿತ್ತು. ಕಾರುಗಳು ಬಹಳವಾಗಿ ಇಲ್ಲದ, ಸ್ಥಿತಿವಂತರೇ ಹೆಚ್ಚೇನೂ ಇಲ್ಲದ ಸ್ಥಳ ಅದು. ಎಲ್ಲಿದೆ ಎಂದು ಕೇಳಿದರೆ ಬಹುಷಃ ಭೂಪಟದಲ್ಲಿ ತೋರಿಸಲೂ ಕಷ್ಟವಾಗುವಂಥಾ ಹಳ್ಳಿ ಅದು. ಅದಕ್ಕೂ ಪೇಟೆಗೂ ನಡುವೆ ಅದ್ಯಾವುದೋ ಒಂದು ಗಡಿ. ಅಲ್ಲಿ ಯಾವುದೋ ದೇಶಕ್ಕೆ ಸಂಬಂಧಿಸಿದ ಸೈನ್ಯದವರ ಪಾರ. ಆ ಊರಲ್ಲಿ ಎಲ್ಲಾ ಊರಿನಂತೆ ಒಬ್ಬ ಹುಚ್ಚ ಒಂದಷ್ಟು ಕೇಡಿಗರು, ಮತ್ತೊಂದಷ್ಟು ಬಡವರು ಮತ್ತೆ ಮತ್ತಷ್ಟು ಬಡವರು. ಹೀಗೆ ಹೇಳಿಕೊಳ್ಳಲು ವಿಶೇಷವೇನೂ ಇಲ್ಲದ ಒಂದೂರು ಅದು. ಅಲ್ಲಿ ನಮ್ಮ ಕಥಾ ನಾಯಕ ಬೆಟೋ ಹಾಗೂ ಅವನ ಹೆಂಡತಿ ಹಾಗೂ ಒಬ್ಬ ಮಗಳು ಬದುಕುತ್ತಿದ್ದಾರೆ. ಅವರದು ತೀರಾ ಕಷ್ಟದ ಬದುಕು. ಬೆಟೋನಿಗೆ ತನ್ನ ಯೋಚನಾ ಸರಣಿಯ ಬಗ್ಗೆ ಅಭಿಮಾನ ಹಾಗೂ ಅವನ ಕುಟುಂಬ ಅವನ ನಿಷ್ಟಾವಂತ ಅನುಯಾಯಿಗಳು. ಮಗಳು ಅಪ್ಪನಂತೆಯೇ ಕನಸುಗಾತಿ. ಆಕೆಗೆ ರೇಡಿಯೋದಲ್ಲಿ ಕೆಲಸ ಮಾಡುವ ಆಸೆ. ಬಡತನವಾದರೂ ಬೆಟೋ ನಡೆಸುತ್ತಿದ್ದ ಸಣ್ಣ ಮಟ್ಟದ ಕಳ್ಳಸಾಗಣೆಯಿಂದ ಅವರ ಜೀವನ ಸಾಕಷ್ಟು ಶಾಂತಿಯುತವಾಗಿಯೇ ನಡೆಯುತ್ತಿತ್ತು. ಹೀಗಿರಲು ೧೯೮೮ನೇ ಇಸವಿಯ ಒಂದು ದಿನ…
Categories: Film reviews
ಸಾಹಸಮಯ ಜೀವನದ ಸಾಹಸೀ ಚಿತ್ರೀಕರಣ
July 20, 2009 · 2 Comments
ಚಲನಚಿತ್ರ ಕ್ಯಾಮರಾ ತಯಾರಕರಲ್ಲಿ ಪ್ರಮುಖರಾದ ಲ್ಯುಮಿಯರ್ ಸಹೋದರರು, ಇದೊಂದು ಭವಿಷ್ಯವಿಲ್ಲದ ಉಪಕರಣ ಎಂದರು. ಮೊದಲು ಲ್ಯುಮಿಯರ್ ಸಹೋದರರು ತಮ್ಮ ಕ್ಯಾಮರಾವನ್ನು ದಾಖಲೀಕರಣ ಉಪಕರಣವಾಗಿ ಬಳಸಲಾರಂಭಿಸಿದರು. ಕ್ಯಾಮರಾ ಮಾರಟಕ್ಕೆ ಸಹಾಯವಾಗಲಿ ಎಂದು ಬೇರೆ ಬೇರೆ ದೇಶಗಳಲ್ಲಿ ಸಂಚರಿಸಿ ಅಲ್ಲಿನ ಕೆಲವು ದೃಶ್ಯಗಳನ್ನು ಸೆರೆಹಿಡಿದು ಅಲ್ಲಿನ ಜನಕ್ಕೆ ತೋರಿಸಿದರು. ಮೊತ್ತ ಮೊದಲಿನ ಸಾಕ್ಷ್ಯಚಿತ್ರಗಳು ಹೀಗೆ ನಿರ್ಮಾಣವಾದುವು!
Categories: Film reviews