ABHAYA TALKIES

Entries categorized as ‘Story time’

ಮೂಡಿನ ತೆರೆಯಲ್ಲಿ ಮರೆಯಾದವ!

January 3, 2009 · 4 Comments

ಪ್ರಿಯರೇ… ಈ ಬ್ಲಾಗಿನ ಮೂಲಕವೇ ನಾನು ಮದುವೆಯಾದದ್ದನ್ನು ನಿಮ್ಮೆಲ್ಲರೊಂದಿಗೆ ಹಂಚಿಕೊಂಡಿದ್ದೆ. ಸದ್ಯಕ್ಕೆ ಮಂಗಳೂರಿನಲ್ಲಿ ಓದುತ್ತಿರುವ ನನ್ನ ಹೆಂಡತಿ ಬರೆದ ಒಂದು ಕಥೆಯನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ಇಷ್ಟಪಡುತ್ತೇನೆ. ಕೆಳಗಿನ ಕಥೆ… ರಶ್ಮಿಯಿಂದ…

ಕ್ಲಿನಿಕ್ ಗೆ ಬರುತ್ತಿದ್ದ ಪೇಷೆ೦ಟ್ ಗಳನ್ನು ಅಟ್ಟೆ೦ಡ್ ಮಾಡಿ ಸುಸ್ತಾಗಿ ಕುಳಿತಿದ್ದಾನೆ ಚಿರಾಗ್.  ಈ ಹಾಳಾದ ರೋಗಗಳು ಯಾಕಾದರೂ ಬರುತ್ತವೋ ಜನಕ್ಕೆ.  ರೋಗ ಬ೦ದವರೆಲ್ಲಾ ಸಾಯದೆ ತನ್ನ ಬಳಿಗಾದರೋ ಯಾಕೆ ಬರಬೇಕು ? ಅಥವಾ ಇಷ್ಟು ದೊಡ್ಡ ನಗರದಲ್ಲಿ ಬೇರೆ  ಡಾಕ್ಟ್ರುಗಳೇ ಇಲ್ಲವೇ? ಹೀಗೇ ಅವನ ಮನಸಿಗೆ ರಾತ್ರಿಯಾಗುತ್ತಿದ್ದ೦ತೆ ಇನ್ನಷ್ಟು  ಸುಸ್ತಾಗತೊಡಗಿತು .ಈಗ ಸಮಯ ೭.೩೦. ಸಿಟಿ ಚಾನೆಲ್ ನಲ್ಲಿ ಅವನ ಪ್ರಿಯಕರೆ ಪ್ರಿಯಾ ಕಾಣಿಸಿಕೊಳ್ಳುತ್ತಾಳೆ.- ಹಾಯ್ ಚಮ್ಸ್.. ವೆಲ್ಕಮ್ ಟು ಯುವರ್ ಫೇವರಿಟ್ ಶೋ “ಇಲು ಇಲು “   ಈ ಸಖತ್ ಸ೦ಜೆಯಲ್ಲಿ ನಿಮ್ಮ ಲವ್ಲೀ ಪ್ರಿಯ ನಿಮ್ಜೊತೆ ಮಾತಾಡೊದಕ್ಕೆ ಕಾಯ್ತ ಇದೀನಿ..  ಹಲೋ.. – ಅ೦ತ ಚಿರಾಗನಿಗೆ ಸ್ವಲ್ಪವೂ ಇಷ್ಟವಿಲ್ಲದ ರೀತಿಯಲ್ಲಿ ಕಾಣಿಸಿಕೊಳ್ಳುತ್ತಾಳೆ. ಇನ್ನುಳಿದ೦ತೆ ಆತ ಅವಳನ್ನು  ಪ್ರೀತಿಸುತ್ತಾನೆ: ಗೌರವಿಸುತ್ತಾನೆ. ಸಣ್ಣವನಿದ್ದಾಗ ಶಾಲೆಯಿ೦ದ ಮನೆಗೆ ತೆರಳುವ ಹೊತ್ತು ಬೀಡಿ ಹೆ೦ಗಸರು ಅದರಲ್ಲೂ ಲ೦ಗ ರವಿಕೆ ಹಾಕುತ್ತಿದ್ದ ಯುವತಿಯರು ಮುಖಕ್ಕೆ ಅರ್ಧ ಇ೦ಚು ಪೌಡರು ಬಳಿದುಕೊ೦ಡು  ಇಲ್ಲದ ಎದೆಯನ್ನು ಏರಿಸಿಕೊ೦ಡು  ಅಟ್ತೆ ಕಾಲಿಟ್ಟುಕೊ೦ಡು ಅಸಹ್ಯವಾಗಿ ನಡೆಯುತ್ತಾ ಕಿರಿದಾದ ಕಣಿವೆಯ೦ತಹ ದಾರಿಯಲ್ಲಿ ಎದುರು ಬದುರಾಗಿ ಸಿಗುವಾಗ ಉ೦ಟಾಗುತ್ತಿದ್ದ ಯಾವುದೋ ಭಾವದ ಎಳೆ ಆತನಲ್ಲಿ ಮತ್ತೆ ಕಾಣಿಸಿಕೊಳ್ಳುತ್ತದೆ – ಕೆಲವು ಟಿವಿ  ಆ೦ಕರ್ ಗಳನ್ನು ಕ೦ಡಾಗ.   ಒ೦ದೇ ಕಾರಣಕ್ಕೆ  ಅವನಿಗೆ ಪ್ರಿಯಳನ್ನು  ಈ ಅರ್ಧ ಗ೦ಟೆ ನೋಡುವುದಕ್ಕೆ ಇಷ್ಟವಾಗುವುದಿಲ್ಲ .ಆದರೂ ನೋಡುತ್ತಾನೆ, ಅವಳಿಗಾಗಿ .  ಅವಳು ಅ೦ಕಣಗಾರ್ತಿಯಾದರೆ ಚೆನ್ನ ಎನಿಸುವುದು ಆತನಿಗೆ. ಯಾರ್ಯಾರದೋ ಅ೦ಕಣ ಬರಹವನ್ನು ಮೆಚ್ಚಿ ಬರೆಯುತ್ತಿದ್ದ ಪ್ರತಿಕ್ರಿಯೆಯಿ೦ದಲೇ ಈ ಈರ್ವರ ಪ್ರೆಮ ಹುಟ್ಟಿದ್ದು ಎ೦ದರೆ ಕೇಳಿದವರು ನಗುತ್ತಾರೆ.

(more…)

Categories: Story time

“ಹಲೋ… ನಾನು…”

December 2, 2008 · 11 Comments

ಫಿಲಂ ಸಿಟಿಯ ಹೊರಗಡೆ ಇರುವ ನಾಗರಿಕ್ ನಿವಾರ್ ಪರಿಷದ್ ಫ್ಲಾಟ್ಗಳಲ್ಲಿ ಬೆಳಗಾದಾಗ ಕೋಳಿ ಕೂಗುವುದಿಲ್ಲ. ಅಲ್ಲಿ ಕಾಗೆಗಳು ಆ ಕೆಲಸವನ್ನು ಮಾಡುತ್ತವೆ. ಹಿಂದಿನ ದಿನ ರಾತ್ರಿ ಯಾವುದೋ ಮನೆಯವರು ಹೊಡೆದು ಬಿಸಾಡಿದ ಹೆಗ್ಗಣದ ಹೆಣದ ಪೋಸ್ಟ್ಮಾರ್ಟಮ್ ಮಾಡಲು ಕಾಗೆಗಳ ದಂಡು ಅಂದು ಪದ್ಮಾ ಫ್ಲಾಟ್ ಹೊರಗಡೆ ಸೇರಿದ್ದವು. ಉಮ್ಮರ್ ಫಾರೂಕ್‍ನಿಗೆ ಕಾಗೆಗಳ ಸಂಗೀತ ಮೇಳದೊಂದಿಗೆ ಬೆಳಗಾದದ್ದು ಹೊಸದೇನೂ ಆಗಿರಲಿಲ್ಲ. ಅಂದ ಹಾಗೆ ಈ ಉಮ್ಮರ್ ಫಾರೂಕ್ ಈ ಫ್ಲಾಟಿನಲ್ಲಿ ಕಳೆದ ಆರು ತಿಂಗಳಿಂದ ವಾಸಿಸುತ್ತಿದ್ದಾನೆ. ಅವನ ಫ್ಲಾಟ್ ಮೇಟ್ ತ್ರಿಪುರಾರಿ ಶರನ್. ಉಮ್ಮರ್ ಫಾರೂಕ್ ಮೂಲತಃ ಮಂಗಳೂರಿನವ. ಅವನು ಮಂಗಳೂರಿನಲ್ಲಿ ಪದವಿ ಮುಗಿಸಿದ ನಂತರ ಮುಂಬೈನಲ್ಲಿ ಎಂ.ಬಿ.ಎ ಓದಿಕೊಂಡಿದ್ದ. ಉಮ್ಮರ್ ಫಾರೂಕ್ ಪದವಿಯ ನಂತರ ಎಂ.ಬಿ.ಎ ಓದಿಕೊಂಡಿದ್ದ. ಆರ್ಥಿಕ ಕುಸಿತದ ಹೊರತಾಗಿಯೂ ಅವನಿಗೆ ಮುಂಬೈನ ಅಂತರರಾಷ್ಟೀಯ ಕಂಪನಿಯಲ್ಲಿ ಕೆಲಸಕ್ಕೆ ಆಹ್ವಾನ ಬಂದಿತ್ತು. ಆತ ಜೀವನದ ಉದ್ದಕ್ಕೂ ಕಂಡಿದ್ದ ಕನಸು ಅದು. ಆ ದಿನ ಬೆಳಗ್ಗೆ ಮುಂಬೈನ ಫಿಲಂ ಸಿಟಿ ಹೊರಗಡೆ ಇರುವ ತನ್ನ ವನ್ ಬೆಡ್ ರೂಮ್ – ಹಾಲ್ – ಕಿಚನ್ನಲ್ಲಿ ಆತ ಬೆಳಗ್ಗೆ ಆರು ಗಂಟೆಗೇ ಎದ್ದಿದ್ದನು. ಅವನ ಗೆಳೆಯ ತ್ರಿಪುರಾರಿ ಶರನ್ ಕಳೆದ ಒಂದು ವರ್ಷದಿಂದ ಸಿನೆಮಾಗಳಲ್ಲಿ ಕೆಲಸ ಹುಡುಕುತ್ತಾ ಒಂದು ದಿನ ತಾನು ಮುಂಬೈಯ ಕೊಳಕಿನ ಮೇಲೆ ಹಾರಿ ಹೋಗುವ ಕನಸು ಕಾಣುವವನು. ಮೂಲತಃ ಅವನು ಬಿಹಾರದ ಪಾಟ್ನಾದಿಂದ ಇನ್ನೂರು ಕಿಲೋಮೀಟರ್ ದೂರದ ಒಂದು ಸಣ್ಣ ಹಳ್ಳಿಯವನು. ಉಮ್ಮರ್ ಫಾರೂಕ್ ಬೇಗನೇ ಸ್ನಾನ ಮುಗಿಸಿದನು. ತ್ರಿಪುರಾರಿ ಅವತ್ತು ಅದೇನೋ ಬೇಗನೇ ಎದ್ದು ಸಿದ್ದಿವಿನಾಯಕನಿಗೆ ನಮಸ್ಕಾರ ಮಾಡಿ ಸಣ್ಣಮಟ್ಟಿನ ಪೂಜೆಯನ್ನೇ ಮಾಡಿ ಉಮ್ಮರನಿಗೆ ಇಂದು ಕೆಲಸ ಸಿಗಲಿ ಎಂದು ಆಶಿಸಿ ಅವನಿಗೆ ಪ್ರಸಾದ ಕೊಟ್ಟನು. ಪ್ರಸಾದ?! ಮತ್ತೇನೂ ಅಲ್ಲ ಒಂದಿಷ್ಟು ಸಕ್ಕರೆ ಅಷ್ಟೇ. ಉಮ್ಮರ್ ನಕ್ಕ. ಮಗನೇ ನನಗೆ ಕೆಲಸ ಸಿಕ್ಕಿದರೆ, ನೀನು ಆರಾಮಾಗಿ ಮಜಾ ಮಾಡಬಹುದಂತ ಅಲ್ವಾ ಇದೆಲ್ಲಾ ನಿನ್ನ ನಾಟಕ? ಹ… ಹ… ಇಬ್ಬರೂ ಗೆಳೆಯರು ನಕ್ಕರು. ಅಂತೂ ಇಂತೂ ತಯಾರಾಗಿ ಉಮ್ಮರ್ ಮನೆಗೆ ಸಮೀಪದ ಲೋಕಲ್ ರೈಲು ಹತ್ತಿದನು. ಆಗ ಸಮಯ ಸುಮಾರು ಒಂಭತ್ತು ಗಂಟೆ. ಅಂದು ಭಾರತ-ಆಸ್ಟ್ರೇಲಿಯಾ ನಡುವೆ ಭಾರೀ ಮಹತ್ವದ ಕ್ರಿಕೆಟ್ ಪಂದ್ಯ ಇದ್ದದ್ದರಿಂದ ಲೋಕಲ್ ರೈಲಿನಲ್ಲಿ ಭಾರೀ ನೂಕು ನುಗ್ಗಲೇನೂ ಇರಲಿಲ್ಲ. ಪಂದ್ಯ ಆಗಷ್ಟೇ ಆರಂಭವಾಗಿತ್ತು. ರೈಲಿನಲ್ಲಿ ಯಾರದೋ ರೇಡಿಯೋದಲ್ಲಿ ಭಾರತ ಆಗಲೇ ಒಂದು ವಿಕೇಟ್ ಕಳೆದುಕೊಂಡಿರುವುದು ತಿಳಿದು ಉಮ್ಮರ್ನಿಗೆ ಸ್ವಲ್ಪ ಬೇಸರವಾಯಿತು. ಆದರೆ ಸಚಿನ್ ಇನ್ನೂ ಆಡುತ್ತಿರುವುದು ಅವನಿಗೆ ನೆಮ್ಮದಿ ಕೊಟ್ಟಿತು. ಸುಮಾರು ಇಪ್ಪತ್ತು ನಿಮಿಷದ ದಾರಿ ಲೋಕಲ್ ರೈಲಿನಲ್ಲಿ ಮತ್ತೆ ಐದು ನಿಮಿಷ ನಡಿಗೆಯ ದೂರದಲ್ಲೇ ಹೋಟೇಲ್ ರಾಜ್ಕಮಲ್. ಇಂದು ಅಲ್ಲೇ ಭೇಟಿಯಾಗುವುದಾಗಿ ಬೊಮನ್ ದೋತಿವಾಲ ಹೇಳಿದ್ದರು. ಉಮ್ಮರ್ ಹೋಟೇಲ್ ಸಮಯಕ್ಕೆ ಸರಿಯಾಗಿ ಸೇರಿದ. ಮುಂಬೈ ಎಷ್ಟೇ ಹಾಳಾದರೂ ಇಲ್ಲಿ ಲೋಕಲ್ ರೈಲು ಮತ್ತಿತರ ವ್ಯವಸ್ಥೆಗಳು ಚೆನ್ನಾಗಿವೆ ಎಂದು ಅಂದುಕೊಂಡ ಉಮ್ಮರ್. ಉಮ್ಮರ್ ಹೋಟೇಲ್ ತಲಪುವುದಕ್ಕೆ ಸರಿಯಾಗಿ ಅವನ ಮೊಬೈಲ್ ರಿಂಗ್ ಆಗುತ್ತದೆ. ಅದನ್ನೆತ್ತಿ ನೋಡಿದರೆ, ಅದ್ಯಾವುದೋ ಮಂಗಳೂರಿನ ಕಡೆಯ ಲ್ಯಾಂಡ್ ಲೈನ್ ನಂಬರ್. ಕರೆಯನ್ನು ರಿಸೀವ್ ಮಾಡುತ್ತಾನೆ… “ಹಲೋ ನಾನ್ ಉಮ್ಮರ್ ಪಲಕಪರೆಯೊ.” ಆದರೆ ಮರುಕ್ಷಣ…

(more…)

Categories: Story time