ಸಿನೆಮಾ
ಎನ್ನುವುದು ಒಂದು ಮಾಯೆ. ಇದನ್ನು ನಂಬಿ ಬದುಕುವವರ ಜೀವನಗಳು ಅವೆಷ್ಟೋ! ಇದನ್ನು ಮನರಂಜನೆಯ ಮಾಧ್ಯಮ
ಎಂದು ಕೆಲವರು ಗ್ರಹಿಸಿದರೆ, ಇನ್ನು ಕೆಲವರು ಅದನ್ನು ಸಂದೇಶ ತಲುಪಿಸುವ ಮಾಧ್ಯಮವನ್ನಾಗಿ ಕಂಡರು.
ಮತ್ತೂ ಕೆಲವರಿಗೆ ಸಿನೆಮಾ ಒಂದು ಅಭಿವ್ಯಕ್ತಿಯ, ಸೃಜನಶೀಲ ಮಾಧ್ಯಮವಾಗಿತ್ತು. ಆದರೆ ಇವೆಲ್ಲಾ ದೃಷ್ಟಿಕೋನಗಳ
ಹಿಂದೆ ಅಡಗಿದ್ದು ಸಿನೆಮಾ ಮಾಧ್ಯಮದ ಒಂದು ಸಾಧ್ಯತೆ ಅಥವಾ ಸೀಮಿತತೆ. ಅದು, ಸಿನೆಮಾ ಒಂದು ತಾಂತ್ರಿಕ
ಕಲೆ. ಇತರ ಕಲಾ ಪ್ರಬೇಧಗಳಿಗೆ ಹೋಲಿಸಿದಾಗ ಸಿನೆಮಾ ಎನ್ನುವುದು ಬಹುಮಟ್ಟಿಗೆ ತಂತ್ರಜ್ಞಾನ ಅವಲಂಬಿತವಾಗಿದೆ.
ಸಿನೆಮಾದ ಐತಿಹಾಸಿಕ ಘಟ್ಟಗಳನ್ನು ಗುರುತಿಸುವಾಗಲೂ, ಈ ತಾಂತ್ರಿಕ ಬೆಳವಣಿಗೆಗಳನ್ನು ಗಮನಿಸಲಾಗುತ್ತದೆ.
ಈ ನಿಟ್ಟಿನಲ್ಲಿ ಸಿನೆಮಾದ ಬೆಳವಣಿಗೆಯ ಸಂದರ್ಭದಲ್ಲಿ ತಂತ್ರಜ್ಞಾನದ ಪರಿಚಯ ಹಾಗೂ ಬದಲಾವಣೆಯ ಕುರಿತಾಗಿ
ಸಂಕ್ಷಿಪ್ತವಾಗಿ ಮಾತನಾಡುವುದು ನನ್ನ ಉದ್ದೇಶ.

ಚಲಿಸುವ
ಬಿಂಬಗಳನ್ನು ದಾಖಲಿಸಿ, ಅದನ್ನು ಯಥಾವತ್ತಾಗಿ ಮರುಸೃಷ್ಟಿಸುವುದು ನೂರು ವರ್ಷ ಹಿಂದೆ ವಿಜ್ಞಾನಿಗಳಿಗೆ
ಒಂದು ಕನಸಾಗಿತ್ತು. ಈ ಸಂಶೋಧನೆಯಲ್ಲಿ ವಿಜ್ಞಾನಿಗಳು ಇದ್ದಾಗ ಅದಕ್ಕೆ ಮನುಷ್ಯ ಬಿಂಬವನ್ನು ಗ್ರಹಿಸುವ
ವಿಧಾನದೆಡೆಗೆ ವಿಜ್ಞಾನಿಗಳ ಗಮನ ಹೋಯಿತು.

ಹಾಗಾದರೆ
ಈ ಬಿಂಬ ಮನುಷ್ಯನ ಕಣ್ಣುಗಳಲ್ಲಿ ಉಂಟಾಗುವುದಾದರೂ ಹೇಗೆ ಎನ್ನುವುದನ್ನು ನಾವಿಲ್ಲಿ ಗಮನಿಸಬೇಕು. ಸಿನೆಮಾದ
ಮುಂದಿನ ನೂರುವರ್ಷದ ನಡಿಗೆಯಲ್ಲಿ ಮಹತ್ತರ ಪಾತ್ರವಹಿಸುವುದು, ವಿಜ್ಞಾನಿಗಳು ಈ ವಿಷಯವನ್ನು ಅರ್ಥೈಸಿರುವ
ಬಗೆಯಲ್ಲಿ. ಮನುಷ್ಯನ ಕಣ್ಣುಗಳ ಮೇಲೆ ಬಿದ್ದ ಬಿಂಬ ನರಗಳ ಸಹಾಯದಿಂದ ಮೆದುಳನ್ನು ತಲುಪಿ ಅದನ್ನು ಅರ್ಥೈಸಲಾಗುತ್ತದೆ.
ಈ ಎಲ್ಲಾ ಪ್ರಕ್ರಿಯೆಗೆ ಒಂದು ಸಣ್ಣ ಕಾಲಾವಧಿ ಬೇಕಾಗುತ್ತದೆ. ಈ ಅತ್ಯಂತ ಸಣ್ಣ ಕಾಲದ ಒಳಗೆ ಕಣ್ಣಿನ
ಮೇಲೆ ಇನ್ನೊಂದು ಪ್ರತ್ಯೇಕ ಬಿಂಬ ಬಿದ್ದಲ್ಲಿ, ಮೆದುಳು ಅವೆರಡನ್ನೂ ಪ್ರತ್ಯೇಕವಾಗಿ ಗುರುತಿಸಲಾರದೇ
ಹೋಗುತ್ತದೆ. ಮಾನವನ ನೋಟದಲ್ಲಿನ ಈ ನ್ಯೂನತೆಯನ್ನು, ವಿಜ್ಞಾನಿಗಳು ತಮ್ಮ ಅನುಕೂಲಕ್ಕೆ ಬಳಸಿಕೊಂಡರು!

ಒಂದು
ಸೆಕೆಂಡಿನೊಳಗೆ ನಿರ್ದಿಷ್ಟ ಸಂಖ್ಯೆಯ ಚಿತ್ರಗಳನ್ನು ಒಂದಾದ ಮೇಲೊಂದರಂತೆ ತೋರಿಸಿದರೆ ಬಿಂಬದಲ್ಲಿ
ಚಲನೆಯನ್ನು ದಾಖಲಿಸಬಹುದು ಎಂದು ವಿಜ್ಞಾನಿಗಳು ಪ್ರಯೋಗದಿಂದ ಕಂಡುಕೊಂಡರು. ಆದರೆ ಕ್ಷಣವೊಂದಕ್ಕೆ
ತೋರಿಸಬೇಕಾದ ಬಿಂಬಗಳ ಬಗ್ಗೆ ಪ್ರಯೋಗಗಳು ನಡೆದವು. ಕ್ಷಣಕ್ಕೆ ಆರು ಬಿಂಬಗಳಿಂದ ಆರಂಭವಾಗಿ ಹನ್ನೆರಡು,
ಹದಿನಾರರವರೆಗೂ ಪ್ರಯೋಗಗಳನ್ನು ಮಾಡಲಾಯಿತು. ಬಿಂಬದ ಚಲನೆ ಸಾಕಷ್ಟು ಸುಲಲಿತವಾಗಿ ದಾಖಲಾಗುತ್ತಿದ್ದರೂ,
ಬಿಂಬವನ್ನು ಅಷ್ಟು ರಭಸವಾಗಿ ಒಂದಾದ ಮೇಲೊಂದರಂತೆ ಇನ್ನೊಂದನ್ನು ದಾಖಲಿಸುವ ಮತ್ತು ತೋರಿಸುವ ಯಂತ್ರವನ್ನು
ರೂಪಿಸುವುದು, ಅದನ್ನು ದಾಖಲಿಸುವಂಥಾ ಮಾಧ್ಯಮವನ್ನು ರೂಪಿಸುವುದು ಅಂದಿನ ತಂತ್ರಜ್ಞಾನದ ಮಟ್ಟಿಗೆ
ಒಂದು ಸವಾಲೇ ಆಗಿತ್ತು. ಅದನ್ನು ಆ ಕಾಲದ ಸಾಹಸಿಗರು ಸಾಧಿಸಿಯೇ ಬಿಟ್ಟರು.

ರೀಲಿನಲ್ಲಿ
ಒಂದೊಂದೇ ಫ್ರೇಮ್ ಬಂದು ನಿಲ್ಲಬೇಕು, ಅದನ್ನು ಪ್ರೆಝರ್ ಪ್ಲೇಟ್ ಹಿಡಿದು ನಿಲ್ಲಬೇಕು. ರಿಜಿಸ್ಟ್ರೇಷನ್
ಪಿನ್ ಅದನ್ನು ಒತ್ತಿ ಹಿಡಿಯ ಬೇಕು. ಆಮೇಲೆ ಷಟರ್ ತೆರೆದು ಬೆಳಕನ್ನು ಒಳಗೆ ಬಿಡಬೇಕು. ಮತ್ತೆ ಷಟರ್
ಮುಚ್ಚಬೇಕು, ರಿಜಿಸ್ಟ್ರೇಷನ್ ಪಿನ್ ಹಿಂದೆ ಸರಿಯಬೇಕು, ಪುಲ್ ಡೌನ್ ಕ್ಲಾಗ್ ಬಂದು ಫ್ರೆಮನ್ನು ಮುಂದಕ್ಕೆ
ಸರಿಸಿ ಹೊಸ ಫ್ರೇಮನ್ನು ತಂದು ಅದೇ ಸ್ಥಾನದಲ್ಲಿ ನಿಲ್ಲಿಸಬೇಕು. ಇವಿಷ್ಟೂ ಪ್ರಕ್ರಿಯೆ ಒಂದು ಸೆಕೆಂಡಿಗೆ
ಕನಿಷ್ಟ ಹದಿನಾರು ಬಾರಿ ಆಗಬೇಕಿತ್ತು! ಕೇಳಲೇ ಇಷ್ಟೊಂದು ಕ್ಲಿಷ್ಟಕರವಾಗಿರುವ ಯಂತ್ರವನ್ನು, ಮಸೂರ
ವಿಜ್ಞಾನ, ಮೆಕಾನಿಕಲ್ ವಿಜ್ಞಾನ ಹಾಗೂ ರಸಾಯನ ವಿಜ್ಞಾನಗಳ ಸಮ್ಮಿಳನದ ಈ ವಿಶಿಷ್ಟ ಮಾಧ್ಯಮ ಹೀಗೆ ರೂಪುಗೊಂಡಿತ್ತು!

ಸರಿ
ದೃಶ್ಯವನ್ನು ದಾಖಲೀಕರಿಸುವ ಉಪಕರಣವೇನೋ ರೂಪುಗೊಂಡಿತ್ತು. ಅದರದ್ದೇ ಹಿಮ್ಮುಖ ಪ್ರಕ್ರಿಯೆಯ ಮೂಲಕ
ಚಲಿಸುವ ಬಿಂಬಗಳನ್ನು ಬಿಳಿಪರದೆಯ ಮೇಲೆ ತೋರಿಸುವ ಯಂತ್ರವನ್ನೂ ರೂಪಿಸಲಾಯಿತು. ಹೀಗೆ ಚಿತ್ರ ಪ್ರದರ್ಶಕವನ್ನೂ
ರೂಪಿಸಿದ್ದಾಯಿತು. ಮೊದಲ ಚಲಿಸುವ ಬಿಂಬಗಳು ಪರದೆಯ ಮೇಲೆ ಮೂಡಿ ಬಂದಾಗ ಕಾತುರದಿಂದ, ಕುತೂಹಲದಿಂದ
ಕತ್ತಲ ಕೋಣೆಯಲ್ಲಿ ಕಾದು ಕುಳಿತಿದ್ದ ಪ್ರೇಕ್ಷಕರು ಜೀವ ಭಯದಿಂದ ಕೋಣೆ ಬಿಟ್ಟು ಓಡಿದ್ದರಂತೆ! ಅಂಥಾ
ದಿವ್ಯ ಅನುಭವ ಅವರ ಜೀವನದಲ್ಲಿ ಹಿಂದೆಂದೂ ಆಗಿಯೇ ಇರಲಿಲ್ಲ. ಚಲಿಸುವ ಬಿಂಬಗಳ ಮಾಯಾಜಾಲ ಒಂದಷ್ಟು
ಕಾಲ ಜನರನ್ನು ರಂಜಿಸಿತು. ಧ್ವನಿ ಇಲ್ಲ. ಬಣ್ಣ ಇಲ್ಲ. ನಿಯಂತ್ರಿತ ಚಲನೆಯೂ ಇಲ್ಲದ ಆ ಕಚ್ಚಾ ಚಲನ
ಚಿತ್ರಕ್ಕೂ ಜನರ ಬೆರಗು ಕಣ್ಣುಗಳು ಹಾತೊರೆದಿದ್ದವು. ಆಗಿನ್ನೂ ಸಿನೆಮಾದಲ್ಲಿ ಚಿತ್ರ ಚಲಿಸುವ ಮೋಜೇ
ಜನರ ಮನರಂಜನೆಯ ಮೂಲವಾಗಿತ್ತು. ಅಲ್ಲಿ ಒಂದು ಕಲಾ ಮಾಧ್ಯಮವಾಗಿ ಸಿನೆಮಾ ಇನ್ನೂ ಜನಿಸಿಯೇ ಇರಲಿಲ್ಲ.
ಕಥನ ಇನ್ನೂ ಸಿನೆಮಾದ ಭಾಗವಾಗಿಯೇ ಇರಲಿಲ್ಲ.

ಆದರೆ
ತಂತ್ರಜ್ಞಾನ ಬೆಳೆಯುತ್ತಾ ಹೋಯಿತು, ಜೊತೆಗೆ ಜನರಿಗೆ ಬಿಡಿ ಬಿಡಿ ಚಿತ್ರಗಳು ಚಲಿಸುವುದನ್ನು ನೋಡುವುದರಲ್ಲಿ
ಆಸಕ್ತಿಯೂ ಕುಂದುತ್ತಾ ಸಾಗಿತ್ತು. ಇಷ್ಟರಲ್ಲಿ ಸಿನೆಮಾದ ಸಾಹಸಿಗಳು ಸಂಕಲನ ಇತ್ಯಾದಿಗಳನ್ನು ಸಿನೆಮಾ
ಮಾಧ್ಯಮದ ಭಾಗವನ್ನಾಗಿಸಿದರು. ಜನರು ಚಿತ್ರವನ್ನು ಗ್ರಹಿಸುವ, ಚಿತ್ರಗಳ ಜೋಡಣೆಯಲ್ಲಿ ಒಂದು ಕ್ರಮವನ್ನು
ಗ್ರಹಿಸುವ ಮೆದುಳಿನ ಸಾಮರ್ಥ್ಯ ಇತ್ಯಾದಿಗಳನ್ನೂ ಸಿನೆಮಾ ಸಾಹಸಿಗಳು ಗ್ರಹಿಸುತ್ತಾ ಸಾಗಿದರು. ಹೀಗಾಗಿ
ತಂತ್ರಜ್ಞಾನದ ಬೆಳವಣಿಗೆಯೊಂದಿಗೆ ಸಿನೆಮಾ ಬೆಳೆಯುತ್ತಾ ಹೋಯಿತು. ಇಷ್ಟರಲ್ಲಿ ಸಿನೆಮಾಕ್ಕೆ ಧ್ವನಿ
ಬಂತು! ಅಷ್ಟರಲ್ಲಿ ಮೂಕಿ ಸಿನೆಮಾದಲ್ಲಿ ಹೆಸರುವಾಸಿಯಾಗಿದ್ದಂಥಾ ಚಾರ್ಲ್ಸ್ ಚಾಪ್ಲಿನ್‌ರಂಥಾ ಮಹಾನ್
ನಿರ್ದೇಶಕರಿಗೂ ಧ್ವನಿ ಎನ್ನುವುದು ಸಿನೆಮಾದ ಮಟ್ಟಿಗೆ ಒಂದು ಅನವಶ್ಯಕ ವಸ್ತು ಎನಿಸಿದ್ದು ಚೋದ್ಯದ
ವಿಷಯ! ಚಾಪ್ಲಿನ್ ಸಾಕಷ್ಟು ತಡವಾಗಿ ಧ್ವನಿಯ ಸಾಧ್ಯತೆಗಳಿಗೆ ತಮ್ಮನ್ನು ತಾವು ತೆರೆದುಕೊಂಡರೂ, ಅಷ್ಟೇನೂ
ಯಶಸ್ವಿಯಾಗಲಿಲ್ಲ. ಆದರೆ ತಂತ್ರಜ್ಞಾನವಾಗಲೀ, ಸಿನೆಮಾ ಮಾಧ್ಯಮವಾಗಲೀ ಯಾರಿಗೂ ಕಾಯಲೇ ಇಲ್ಲ. ಚಲಿಸುವ
ಚಿತ್ರಗಳು ಮಾತನಾಡಲೂ ಆರಂಭಿಸಿದಾಗ ಜನರಿಗೆ ಸಿನೆಮಾ ಮಂದಿರಗಳೆಡೆಗೆ ಹೆಜ್ಜೆ ಹಾಕಲು ಹೊಸ ಕಾರಣ ಹುಟ್ಟಿಕೊಂಡಿತು.
ಉದ್ದೂದ್ದನೆಯ ಪ್ರಣಯ ಸಂಭಾಷಣೆಗಳು, ಧೀರೋದ್ಧಾತ ಸಂಭಾಷಣೆಗಳ ಮಜ, ವೀರಾವೇಷದ ಆರ್ಭಟಗಳು ಸಿನೆಮಾ ಮಂದಿರಗಳನ್ನೂ,
ಪ್ರೇಕ್ಷಕರ ಮನಸ್ಸುಗಳನ್ನೂ ತುಂಬಿದ ಕಾಲವದು.

ಚಿತ್ರಗಳು
ಚಲಿಸುತ್ತಿದ್ದವು, ಧ್ವನಿಯೂ ಬರುತ್ತಿತ್ತು. ಅಷ್ಟರಲ್ಲಿ ಬಂದು ಸೇರಿದ್ದು ಬಣ್ಣ! ಸಿನೆಮಾದಲ್ಲಿ ಬಣ್ಣದ
ಅಳವಡಿಕೆಯಿಂದ ಪರದೆಯಲ್ಲಿ ಬಣ್ಣದ ಕೋಡಿ ಹರಿಯಿತು. ಇಷ್ಟರಲ್ಲಾಗಲೇ ಸಿನೆಮಾ ಒಂದು ಗಂಭೀರ ಮಾಧ್ಯಮವಾಗಿ
ಪರಿಗಣಿಸಲ್ಪಟ್ಟಿದ್ದು ಅದರಲ್ಲಿ ಗಹನವಾದ ಕಲೆಯನ್ನು ಕಂಡುಕೊಂಡಿದ್ದ ಅನೇಕ ಶ್ರೇಷ್ಟ ನಿರ್ದೇಶಕರು
ಸಾಕಷ್ಟು ಸಂಖ್ಯೆಯಲ್ಲಿದ್ದರು. ಹೀಗಾಗಿ, ಸ್ವೀಡನ್ನಿನ ಇನ್ಗ್‌ಮಾರ್ ಬರ್ಗ್ಮನ್‌ರಂಥಾ ನಿರ್ದೇಶಕರು
ಬಣ್ಣದ ಸಮರ್ಥ ಬಳಕೆಯನ್ನು ಮಾಡಿಕೊಂಡು ಸಿನೆಮಾದಲ್ಲಿ ಬಣ್ಣದ ಸಂಯೋಜನೆಗೆ, ಬಳಕೆಗೆ ಒಂದು ಹೊಸ ಭಾಷ್ಯವನ್ನೇ
ಬರೆದರು. ಪ್ರೇಕ್ಷಕರಿಗೆ ಇದರಲ್ಲಿ ಒಂದು ಹೊಸ ಮನರಂಜನೆ ಮೂಡಿತು. ಮುಂದೊಂದಷ್ಟು ಕಾಲ ಚಲಿಸುವ ಬಿಂಬಗಳಲ್ಲಿ
ಬಣ್ಣದದ್ದೇ ಭರಾಟೆ.

ಹೀಗೆ
ಒಂದೆಡೆಯಲ್ಲಿ ಚಲನಚಿತ್ರಕ್ಕೆ ಮೂಲಭೂತ ಬದಲಾವಣೆಗಳಾಗುತ್ತಿದ್ದರೆ, ಇನ್ನೊಂದೆಡೆ ಮನುಷ್ಯನ ನೋಟದ ಮೇಲೆ
ಹಾಗೂ ನೋಡುವಿಕೆಯ ಹಿಂದಿನ ವಿಜ್ಞಾನದ ಮೇಲೆ ಸಾಕಷ್ಟು ಸಂಶೋಧನೆ ನಡೆದಿತ್ತು. ಹೀಗಾಗಿ ಮನುಷ್ಯನ ಕಣ್ಣುಗಳ
ಸಾಮರ್ಥ್ಯಕ್ಕೆ ತಕ್ಕಂತೆ ವಿವಿಧ ಪ್ರದರ್ಶನಾ ಪರದೆಗಳ ವಿನ್ಯಾಸವೂ, ಪ್ರಯೋಗದಲ್ಲಿತ್ತು. ೧:೧.೬೬,
೧:೧.೮೫, ೧:೨.೩೫ ಹೀಗೆ ಪರದೆಯ ಉದ್ದಗಲಗಳಲ್ಲಿನ ಪ್ರಯೋಗ, ೮ಎಂ.ಎಂ, ೧೬ಎಂ.ಎಂ, ೩೫ಎಂ.ಎಂ ಇತ್ಯಾದಿ
ಮಾಧ್ಯಮಗಳ ಪ್ರಯೋಗ ಇವೆಲ್ಲವೂ ನಡೆದಿತ್ತು. ಕಾಲಾನುಕ್ರಮದಲ್ಲಿ ಒದಗಿ ಬಂದ, ಸಾಮಾಜಿಕ, ಆರ್ಥಿಕ ಕಾರಣಗಳಿಂದಾಗಿ
ಜಗತ್ತಿನ ಬೇರೆ ಬೇರೆ ಮೂಲೆಗಳಲ್ಲಿ ಬೇರೆ ಬೇರೆ ಪ್ರದರ್ಶನಾ ಕ್ರಮಗಳು ನೆಲೆ ನಿಂತವು. ಭಾರತದ ಮಟ್ಟಿಗೆ
ಇಂದು ೧:೨.೩೫ ಅಂದರೆ ಸಿನೆಮಾ ಸ್ಕೋಪ್ ಪ್ರದರ್ಶನಾ ವ್ಯವಸ್ಥೆ ನೆಲೆ ನಿಂತಿತು. ಜರ್ಮನಿ ಮೂಲದ ಆರಿಫ್ಲೆಕ್ಸ್
ಕ್ಯಾಮರಾಗಳು ಭಾರತದಲ್ಲಿ ಪ್ರಚಲಿತಕ್ಕೆ ಬಂದವು, ಇತ್ತೀಚಿನ ದಿನಗಳವರೆಗೂ ಅವುಗಳದ್ದೇ ಅಧಿಪತ್ಯ ನಡೆದಿತ್ತು.

ಒಂದೆಡೆ
ದೃಶ್ಯದ ಮೇಲೆ ವಿಧವಿಧವಾದ ಪ್ರಯೋಗಗಳು ನಡೆದಿದ್ದರೆ, ಇನ್ನೊಂದೆಡೆ ಶ್ರಾವ್ಯದ ಮೇಲೆಯೂ ಪ್ರಯೋಗ ನಡೆದೇ
ಇತ್ತು. ಮಾನವನ ತಲೆಯ ಇಕ್ಕೆಡೆಗಳಲ್ಲಿ ಇರುವ ಕಿವಿಗಳ ಮೇಲೆ ಕ್ರಮವಾಗಿ ಬೀಳುವ ತರಂಗಗಳ ನಡುವಿನ ಕಾಲವ್ಯತ್ಯಾಸದ
ಮೂಲಕ ಶಬ್ದದ ಮೂಲದ ಗ್ರಹಿಕೆಯನ್ನು ಮನುಷ್ಯನ ಮೆದುಳು ಮಾಡುವುದು. ಇದನ್ನು ಕಂಡುಕೊಂಡ ವಿಜ್ಞಾನಿಗಳು,
ಇದನ್ನೇ ಬಳಸಿ, ಯಾಕೆ ಶಬ್ದಕ್ಕೆ ಕೃತಕ ಮೂಲಗಳನ್ನು ಸೃಷ್ಟಿಸಬಾರದು ಎಂದು ಯೋಚಿಸಲಾರಂಭಿಸಿದರು. ಈ
ಚಿಂತನೆಯೇ ಮೊದಲು ಮೋನೋ ಧ್ವನಿಯಾಗಿದ್ದದ್ದು, ಸ್ಟೀರಿಯೋ (ಎರಡು ದಿಕ್ಕಿನಲ್ಲಿನ ಧ್ವನಿ ನಿಯೋಜನೆ)
ತನ್ಮೂಲಕ ೫.೧ ಹಾಗೂ ಇತ್ತೀಚೆಗೆ ಬಂದ ೭.೧ ಹೀಗೆ ರೂಪಾಂತರಗಳನ್ನು ಹೊಂದುತ್ತಾ ಹೋದವು. ಈ ರೀತಿಯ ಧ್ವನಿ
ವಿನ್ಯಾಸದಲ್ಲಿ ಚಿತ್ರ ಮಂದಿರದಲ್ಲಿ ಕುಳಿತ ಪ್ರೇಕ್ಷಕನ ಸುತ್ತ ವೈಜ್ಞಾನಿಕವಾಗಿ ಇಡಲಾಗಿರುವ ಧ್ವನಿ
ವರ್ಧಕಗಳಿಗೆ ನಿರ್ದಿಷ್ಟ ತರಂಗಗಳನ್ನು ಕಳಿಸುವುದರ ಮೂಲಕ ಪ್ರೇಕ್ಷಕನ ಮೆದುಳಲ್ಲಿ ಕೃತಕ ಶಬ್ದ ಮೂಲಗಳನ್ನು
ರೂಪಿಸುವ ಕ್ರಿಯೆ ಮಾಡಲಾಯಿತು. ಹೀಗಾಗಿ ಚಿತ್ರ ಮಂದಿರದಲ್ಲಿ ಕುಳಿತ ಪ್ರೇಕ್ಷಕನ ಕಣ್ಣೆದುರು ಪರದೆಯ
ಸೀಮಿತತೆಯಲ್ಲಿ ಒಂದು ಪ್ರಪಂಚ ಅನಾವರಣಗೊಳ್ಳುತ್ತಿದ್ದರೆ, ಧ್ವನಿ ಆ ಪ್ರಪಂಚವನ್ನು ವಿಸ್ತರಿಸುವಲ್ಲಿ
ಸಹಕಾರಿಯಾಯಿತು. ಇನ್ನು ಈ ೫.೧ ಧ್ವನಿಯ ಸಂಯೋಜನೆಯಲ್ಲಿ ಉಂಟಾಗುವ ನಾಯ್ಸ್ ಕಡಿತಗೊಳಿಸಲು ಡಾಲ್ಬಿ,
ಡಿ.ಟಿ.ಎಸ್ ಇತ್ಯಾದಿ ತಂತ್ರಜ್ಞಾನಗಳೂ ಬಂದವು.

ಸಿನೆಮಾ ಒಂದು ಅತ್ಯಂತ ಸಮೃದ್ಧ ಕಾಲಘಟ್ಟವನ್ನು ಕಂಡು ವಿಜ್ರಂಭಿಸಿತು. ಇನ್ನು ಸಿನೆಮಾದಲ್ಲಿ ಏನೂ
ಹೊಸತು ಬರಲು ಸಾಧ್ಯವಿಲ್ಲ ಎನ್ನುವಂಥಾ ಹಂತವನ್ನು ತಲುಪೇ ಬಿಟ್ಟಿತ್ತು. ಆದರೆ ಕಾಲದ ಗರ್ಭದಲ್ಲಿ ಇನ್ನೊಂದೇ
ಆಶ್ಚರ್ಯ ಹುದುಗಿತ್ತು. ಡಿಜಿಟಲ್ ಯುಗ ಅಷ್ಟರಲ್ಲೇ ಆರಂಭವಾಗಿತ್ತು. ಮೈಕ್ರೋ ಚಿಪ್ಪ್ ಜಗತ್ತನ್ನೇ
ಆವರಿಸಿಕೊಳ್ಳಲಾರಂಭಿಸಿತ್ತು. ಸಿನೆಮಾ ಮಾಧ್ಯಮವೂ ಈ ತಂತ್ರಜ್ಞಾನವನ್ನು ಬೇಗನೇ ಅಪ್ಪಿಕೊಂಡುಬಿಟ್ಟಿತು.
ಕೆಲವೇ ವರ್ಷಗಳ ಅಂತರದಲ್ಲಿ ಸಿನೆಮಾ ಮತ್ತೆ ತನ್ನನ್ನು ತಾನೇ ಮರು ಆವಿಷ್ಕರಿಸಿಕೊಂಡಿತು. ಚಿತ್ರವನ್ನು
ಚಿತ್ರೀಕರಿಸುವ ತಂತ್ರಜ್ಞಾನದಿಂದ ಹಿಡಿದು, ಅದನ್ನು ಪ್ರದರ್ಶಿಸುವ ತಂತ್ರಜ್ಞಾನದವರೆಗೆ ಎಲ್ಲವೂ ಬದಲಾಯಿತು.

ಇಂದು
೨೦೦೦ಮೆಗಾ ಪಿಕ್ಸೆಲ್ ಅಥವಾ ಪ್ರಚಲಿತದಲ್ಲಿ ಹೇಳುವಂತೆ ೨ಕೆ. ರೆಸಲ್ಯೂಷನ್‌ನಲ್ಲಿ ಬಿಂಬವನ್ನು ಗ್ರಹಿಸುವ
ಯಾವುದೇ ಕ್ಯಮರಾದಲ್ಲಿ ಚಿತ್ರ ನಿರ್ಮಿಸಬಹುದು ಎನ್ನುವುದು ಸಾಧಿತವಾಗಿದೆ. ಅಂತೆಯೇ, ಈ ಡಿಜಿಟಲ್ ಮಾಧ್ಯಮದಲ್ಲಿ
ಶೇಖರಿತವಾಗಿರುವ ಚಿತ್ರಗಳನ್ನು ಪ್ರದರ್ಶಿಸಲು ಅಗತ್ಯವಾಗಿರುವ ತಂತ್ರಜ್ಞಾನವೂ ತೀರಾ ಅಗ್ಗವಾಗುತ್ತಿದೆ.
ಹೀಗಾಗಿ ಹೊಸ ತಂತ್ರಜ್ಞಾನ ಸಿನೆಮಾ ಜಗತ್ತಿನಲ್ಲಿ ಅನಾದಿಕಾಲದಿಂದ ನಡೆದು ಬಂದ ಪದ್ಧತಿಗಳಲ್ಲಿ ವಿದ್ಯುತ್
ಸಂಚಾರವನ್ನೇ ಮಾಡಿದೆ.

ತಂತ್ರಜ್ಞಾನದ
ಸಾಧ್ಯತೆಗಳ ಮೂಲಕ ಒಂದು ಕಲೆಯನ್ನು ಕಂಡುಕೊಳ್ಳಲು ಸಿನೆಮಾ ಸಾಹಸಿಗಳು ಸುಮಾರು ನೂರುವರ್ಷ ಹಿಂದೆ ಕಂಡುಕೊಂಡಂದಿನಿಂದ,
ಇವತ್ತಿಗೂ ಸಿನೆಮಾ ತಂತ್ರಜ್ಞಾನದ ಪ್ರತಿಯೊಂದು ಹೊಸ ಬೆಳವಣಿಗೆಯಲ್ಲೂ ಅನೇಕಾನೇಕ ಹೊಸ ಸಾಧ್ಯತೆಗಳು
ತೆರೆದುಕೊಳ್ಳುತ್ತಿದೆ. ಇದರೊಂದಿಗೆ, ಜನರ ನೋಡುವಿಕೆಯ ಕ್ರಮ, ಶಿಸ್ತು ಬದಲಾಗುತ್ತಿವೆ. ಸಿನೆಮಾ ಎನ್ನುವ
ಒಂದು ದೊಡ್ಡ ವಾಣಿಜ್ಯಾತ್ಮಕ ವ್ಯವಸ್ಥೆಯೂ ತನ್ನನ್ನು ತಾನು ಮರುರೂಪಿಸಿಕೊಳ್ಳುತ್ತಾ ಸಾಗಿದೆ. ಭಾರತೀಯ
ಸಿನೆಮಾದ ನೂರುವರ್ಷ ಆಚರಿಸಿಕೊಳ್ಳುತ್ತಿರುವ ಈ ವಿಶಿಷ್ಟ ಸಂದರ್ಭದಲ್ಲಿ ಸಿನೆಮಾದ ತಾಂತ್ರಿಕ ರಂಗದಲ್ಲಿ
ಕ್ರಾಂತಿಕಾರಿ ಕೊಡುಗೆಗಳನ್ನಿತ್ತ ಮಹಾನ್ ಸಂಶೋಧಕರನ್ನು ನೆನಪಿಸಿಕೊಳ್ಳುವುದು, ನಾವು ನಡೆದು ಬಂದ
ದಾರಿಗೆ ಒಂದು ನಮನವಿತ್ತಂತೆಯೇ ಸರಿ.