ಬಹಳ ದಿನಗಳ ನಂತರ ಮತ್ತೆ ಬ್ಲಾಗಿನೆಡೆಗೆ ಬಂದಿದ್ದೇನೆ. ವಿಳಂಬಕ್ಕೆ ಮತ್ತು ಮತ್ತೆ ಮರಳಿ ಬರುವುದಕ್ಕೆ ಎರಡಕ್ಕೂ ಒಂದೇ ಕಾರಣ. ನನ್ನ ಹೊಸ ಚಿತ್ರ ‘ಸಕ್ಕರೆ’. ಗೋಲ್ಡನ್ ಸ್ಟಾರ್ ಗಣೇಶ್ ಮತ್ತು ದೀಪಾ ಸನ್ನಿದಿ ಅಭಿನಯದ ನನ್ನ ಕಥೆ, ಚಿತ್ರಕತೆಯ ಹೊಸ ಚಿತ್ರ ‘ಸಕ್ಕರೆ’ ಚಿತ್ರಕ್ಕೆ ದೃಶ್ಯಗಳ ಚಿತ್ರೀಕರಣ ಮುಗಿಸಿ ಹಾಡುಗಳ ಚಿತ್ರೀಕರಣ ಆರಂಭ ಮಾಡುತ್ತಿದ್ದೇವೆ. ನನ್ನ ಮೊದಲ ಚಿತ್ರ ‘ಗುಬ್ಬಚ್ಚಿಗಳು’ ನಿರ್ಮಿಸಿದ ಮೀಡಿಯಾ ಹೌಸ್ ಸ್ಟೂಡಿಯೋ ಈ ಚಿತ್ರವನ್ನೂ ನಿರ್ಮಿಸುತ್ತಿದ್ದಾರೆ. ಹರಿಕೃಷ್ಣ ಮತ್ತು ಯೋಗರಾಜ ಭಟ್, ಜಯಂತ್ ಕಾಯ್ಕಿಣಿ ಜುಗಲ್ಬಂದಿಯಲ್ಲಿ ಒಳ್ಳೆಯ ಹಾಡುಗಳು ಮೂಡಿ ಬಂದಿವೆ. ಮತ್ತೆ ಹೊಸ ಪಯಣ, ಹೊಸ ಗುರಿ. ಈ ಪಯಣದ ವಿವರಗಳು ಸಧ್ಯದಲ್ಲೇ ನಿಮ್ಮ ಮುಂದೆ ಹಾಜರ್!
Share This