ಗುಬ್ಬಚ್ಚಿಗಳು ಚಿತ್ರದ ಪ್ರಥಮ ಪ್ರದರ್ಶನ ದೆಹಲಿ ಕನ್ನಡ ಸಂಘದಲ್ಲಿ ಎಪ್ರಿಲ್ ೨೬ ಸಂಜೆ ಏಳು ಗಂಟೆಗೆ ನಡೆಯಿತು. ದೆಹಲಿಯಲ್ಲಿರುವ ಗೆಳೆಯರಾದ ಶ್ರೀ ದಿನೇಶ್ ಶಣೈರವರು ಈ ಪ್ರದರ್ಶನವನ್ನು ಏರ್ಪಡಿಸುವಲ್ಲಿ ಮಹತ್ತರವಾದ ಸಹಕಾರ ನೀಡಿದರು. ದೆಹಲೀ ಕನ್ನಡ ಸಂಘದ ಸುಂದರ ಭವನದಲ್ಲಿ ಸಂಜೆ ಆರಂಭವಾದ ಪ್ರದರ್ಶನಕ್ಕೆ ಸುಮಾರು ೨೫೦ ಜನ ಹಾಜರಿದ್ದರು. ರಾಜಧಾನಿ ದೆಹಲಿಯಲ್ಲಿರುವ ಕನ್ನಡಿಗರ ಸಂಘಟನೆ, ಕನ್ನಡ ಸಂಬಂಧೀ ಪ್ರೇಮ ನೋಡಿಯೇ ತೀರುವಂಥಾದ್ದು. ಚಿತ್ರ ಪ್ರದರ್ಶನದ ನಂತರ ಸುಮಾರು ಅರ್ಥಗಂಟೆ ಸಂವಾದ ಕಾರ್ಯಕ್ರಮ ನಡೆಯಿತು. ಈ ಸಂಬಂಧೀ ಕೆಲವು ಛಾಯಾ ಚಿತ್ರಗಳನ್ನು Gallery ವಿಭಾಗದಲ್ಲಿ ಹಾಕಿದ್ದೇನೆ. ದಯವಿಟ್ಟು ನೋಡಿ.

Share This