[slideshow id=3098476543665865194&w=426&h=320]

ಗೆಳೆಯರೇ,
ಬಹಳ ದಿನಗಳಿಂದ ಅನೇಕರು ನನ್ನ ಮೊದಲ ಮಕ್ಕಳ ಚಿತ್ರ, ಗುಬ್ಬಚ್ಚಿಗಳನ್ನು ನೋಡಬೇಕು ಎನ್ನುತ್ತಿದ್ದಿರಲ್ಲಾ? ಇದೋ ಈಗ ವೇದಿಕೆ ಸಿದ್ಧವಾಗಿದೆ. ಯಾವ ಚಿತ್ರೋತ್ಸವದಲ್ಲಿ ನೋಡಲಾಗದೇ ಹೋಗಿದ್ದರೂ ಸರಿ, ನೋಡಿದ್ದರೂ ಸರಿ, ಈಗ ಅವಶ್ಯ ನೋಡಿ ನನ್ನ ಚಿತ್ರವನ್ನು. ಗುಬ್ಬಚ್ಚಿಗಳನ್ನು. ಸಮುದಾಯದ ಗೆಳೆಯರು ಸಹಕಾರೀ ತತ್ವದ ಮೇಲೆ ಗುಬ್ಬಚ್ಚಿಗಳು, ದಾಟು, ಬನದ ನೆರಳು, ಅರ್ಥ ಹೀಗೆ ನಾಲ್ಕು ಚಿತ್ರಗಳನ್ನು ಬೆಂಗಳೂರಿನ ಕೈಲಾಶ್ ಚಿತ್ರ ಮಂದಿರದಲ್ಲಿ ಅಕ್ಟೋಬರ್ ೩೦ರಿಂದ ನವೆಂಬರ್ ೫ರವರೆಗೆ ಪ್ರದರ್ಶಿಸಲಿದ್ದಾರೆ. ಇದು ಸಮಾಜ ಮುಖಿ ಚಿತ್ರಗಳನ್ನು ಪ್ರೇಕ್ಷಕರಲ್ಲಿಗೆ ತಲುಪಿಸುವ ಅಪರೂಪದ ಪ್ರಯತ್ನ. ಇಂಥಾ ಚಿತ್ರಗಳನ್ನು ಸಮರ್ಥಿಸುವವರು, ಪ್ರೋತ್ಸಾಹಿಸುವವರು, ಮಾಡುವವರು, ನೋಡುವವರು ಹೀಗೆ ತಾವೆಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಬರಬೇಕು, ಈ ಸುದ್ದಿಯನ್ನು ಇಷ್ಟ-ಮಿತ್ರರಿಗೆ ತಿಳಿಸಿ ಪ್ರಯತ್ನವನ್ನು ಸಫಲಗೊಳಿಸಬೇಕು ಎಂದು ವಿನಂತಿ.
ಗುಬ್ಬಚ್ಚಿಗಳು ಚಿತ್ರದ ಬಗ್ಗೆ ಇನ್ನಷ್ಟು ಓದಲು, ಚಿತ್ರಗಳನ್ನು ನೋಡಲು, ವೀಡಿಯೋದಲ್ಲಿ ಒಂದು ಝಲಕ್ಕು ನೋಡಲು ಇಲ್ಲಿ ಕ್ಲಿಕ್ ಮಾಡಿ.
ತಮ್ಮ ಉಪಯೋಗಕ್ಕಾಗಿ ಚಿತ್ರದ ವೇಳಾಪಟ್ಟಿಯನ್ನು ಇಲ್ಲಿ ಕೊಟ್ಟಿದ್ದೇನೆ. ಬನ್ನಿ… ಕೈಲಾಶ್ ಚಿತ್ರಮಂದಿರ, ಬೆಂಗಳೂರಿನಲ್ಲಿ ಭೇಟಿಯಾಗೋಣ…

The festival starts, photographs are here.

Share This