ಭಾರತವೂ ಸೇರಿದಂತೆ ವಿಶ್ವದೆಲ್ಲೆಡೆ ಹಂದಿ ಜ್ವರದ ಹಾಹಾಕಾರವೆದ್ದಿದೆ. ಇದೇ ಸಮಯದಲ್ಲಿ ಏನು ಮಾಡಬೇಕು ಏನು ಮಾಡಬಾರದು ಎಂಬ ವಿಷಯಗಳ ಬಗ್ಗೆ ಎಲ್ಲೆಡೆ ಪ್ರಸ್ತಾಪ ಬರುತ್ತಿದೆ. ಈ ಎಲ್ಲಾ ಗೊಂದಲಗಳ ನಡುವೆ, ಮಂಗಳೂರಿನ ತಜ್ಞ ವೈದ್ಯರಾದ ಡಾ| ಶ್ರೀನಿವಾಸ ಕಕ್ಕಿಲ್ಲಾಯರು ಸಾಕಷ್ಟು ಸತ್ಯಗಳನ್ನು ಸಂಗ್ರಹಿಸಿ ತಮ್ಮ ಬ್ಲಾಗಿನಲ್ಲಿ ಪ್ರಕಟಿಸಿದ್ದಾರೆ. ಸಧ್ಯದ ಸಂದರ್ಭಕ್ಕೆ ಅತ್ಯಂತ ಸೂಕ್ತವೆನಿಸಿದ್ದರಿಂದ ಅದನ್ನು ಇಲ್ಲಿ ಪ್ರಕಟಿಸುತ್ತಿದ್ದೇನೆ. (ಮೂಲವನ್ನು ಓದಲು ಇಲ್ಲಿ ಕ್ಲಿಕ್ ಮಾಡಿ) ಡಾ| ಶ್ರೀನಿವಾಸ ಕಕ್ಕಿಲ್ಲಾಯರು ಅನೇಕ ವರುಷಗಳಿಂದ ವೈದ್ಯರಾಗಿ ಮಂಗಳೂರಿನಲ್ಲಿ ಸೇವೆ ಸಲ್ಲಿಸುತ್ತಿದ್ದು, ಮಲೇರಿಯಾ ನಿರ್ಮೂಲನಾ ಆಂಧೋಲನ ಸೇರಿದಂತೆ ಅನೇಕ ಸಾರ್ವಜನಿಕ ಸ್ವಾಸ್ಥ್ಯ ಸಂಬಂಧೀ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವವರು. ವೈದ್ಯಕೀಯ ರಂಗದಿಂದ ಸತ್ಯ ಸಂಗತಿಗಳನ್ನು ಜನರಿಗೆ ತಿಳಿಸುವ ಕುರಿತು ಬಹಳ ಕೆಲಸ ಮಾಡಿದವರು. ಅವರ ‘ಆರೋಗ್ಯ ಸಂಪದ’ ಬ್ಲಾಗ್ ವೈದ್ಯಕೀಯ ರಂಗದಿಂದ ಕನ್ನಡದಲ್ಲಿ ಮೂಡಿಬರುತ್ತಿರುವ ಅಪರೂಪದ ಬ್ಲಾಗ್ ಆಗಿದೆ.

ಅವರ ಲೇಖನಕ್ಕೆ ತಮ್ಮನ್ನು ದಾಟಿಸುವ ಮುನ್ನ ಅದಕ್ಕೇ ಪೂರಕವಾಗಿ ಎರಡು ಮಾತು. ಸಾಮಾಜಿಕ ಅಭಿಪ್ರಾಯವನ್ನು ರೂಪಿಸುವಲ್ಲಿ ನಮ್ಮ ಮಾಧ್ಯಮಗಳದ್ದು ಭಾರೀ ದೊಡ್ಡ ಪಾತ್ರವಿದೆ. ಭಾರತದಲ್ಲಿ ಪ್ರತಿ ಕ್ಷಣ ಎಷ್ಟು ಮಕ್ಕಳು ಸಾಯುತ್ತಿದ್ದಾರೆ ಎಂದು ನಿಮಗೆ ಗೊತ್ತೇ? ಅವುಗಳಿಗೆ ಕಾರಣ ನಿಮಗೆ ಗೊತ್ತೇ? ಆದರೆ ಹಂದಿ ಜ್ವರದಿಂದ ಸತ್ತ ಅಷ್ಟೂ ಮಕ್ಕಳ ಸಂಖ್ಯೆ ನಿಮಗೆ ಗೊತ್ತು. ಏಕೆಂದರೆ, ಅದನ್ನು ಮಾಧ್ಯಮ ನಿಮಗೆ ತಿಳಿಸಿದೆ. ಆ ಮಕ್ಕಳು ಹಂದಿ ಜ್ವರಕ್ಕೆ ಮದ್ದು ಇದ್ದರೂ ಏಕೆ ಸತ್ತರು? ಇದರ ಬಗ್ಗೆ ಯೋಚಿಸಿದ್ದೀರಾ? ಒಮ್ಮೆ ಯೋಚಿಸಿದರೆ ನಿಮಗೆ ಮಾಧ್ಯಮಗಳ ಹಾಗೂ ವೈದ್ಯಕೀಯ ರಂಗದ ಖಳನಾಯಕರ ಕುತಂತ್ರ ನಿಮಗೆ ಥಟ್ಟನೆ ಅರ್ಥವಾಗದೇ ಹೋಗದು. ಎಲ್ಲಾ ಮನಸ್ಸುಗಳನ್ನು ನಿಯಂತ್ರಿಸುವ, ಪರ-ವಿರೋದ ಅಭಿಪ್ರಾಯ ಮೂಡಿಸುವಲ್ಲಿ ಮಹತ್ತರ ಪಾತ್ರವಹಿಸುವ ಒಂದು ಏರ್ಪಾಡಿನ ನಿಯಂತ್ರಣ ಓರ್ವ ವ್ಯಕ್ತಿಯ ಕೈಯಲ್ಲಿ ಇರುವುದು ಎಂಥಾ ಅಪಾಯ ಎಂದು ಒಮ್ಮೆ ಯೋಚಿಸಿ ನೋಡಿ. ಭಾರತದಲ್ಲಿ ಮಾಧ್ಯಮಗಳಲ್ಲಿ ಪರದೇಶಗಳಿಂದ ಹಣ ತೊಡಗಿಸುವುದರ ಕುರಿತಾಗಿ ಕಟ್ಟುನಿಟ್ಟಿನ ನಿಯಮಗಳಿವೆ. ಇವು ಇರುವುದು, ದೇಶದೊಳಗಿನ ಮನಸ್ಸುಗಳ ನಿಯಂತ್ರಣವನ್ನು ಬಾಹ್ಯ ಶಕ್ತಿಗಳು ನಿಯಂತ್ರಿಸದಂತೆ ನೋಡಿಕೊಳ್ಳಲು. ಸರಕಾರ ಇಂಥಾ ಒಂದು ನಿಯಮವನ್ನೇ ಜಾರಿ ತರಬೇಕಾದರೆ, ಮಾಧ್ಯಮಗಳು ಹೇಗೆ ನಮ್ಮನ್ನು ಆಳಬಹುದು ಎಂಬುದನ್ನು ನೀವು ಒಂದು ಅಂದಾಜು ಮಾಡಬಹುದಾಗಿದೆ. ಹೀಗಾಗಿ, ಮಾಧ್ಯಮಗಳಿಂದ ನಾವು ಪಡೆಯುವ ಸುದ್ದಿಯನ್ನೂ ಸೇರಿದಂತೆ ಪ್ರತಿಯೊಂದನ್ನೂ ಗ್ರಹಿಸಿಕೊಂಡು, ದತ್ತಾಂಶಗಳನ್ನು ಪರಿಶೀಲಿಸಿ, ಪರಿಹರಿಸಿಕೊಳ್ಳುವುದು ಇಂದಿನ ಸಾರ್ವಜನಿಕರಿಗೆ ತೀರಾ ಅಗತ್ಯ. ಅದಂತಿರಲಿ.. ಇದರ ಕುರಿತು ಮುಂದೊಮ್ಮೆ ವಿಸ್ತಾರದಲ್ಲಿ ಮಾತನಾಡೋಣ. ಸಧ್ಯಕ್ಕೆ ಡಾ| ಶ್ರೀನಿವಾಸ ಕಕ್ಕಿಲ್ಲಾಯರ ಲೇಖನ ಅವಶ್ಯ ಓದಿ. ತಮ್ಮ ಮಿತ್ರರಿಗೂ ಅವರ ಬ್ಲಾಗ್ ಬಗ್ಗೆ ತಿಳಿಸಿ, ಅರೋಗ್ಯದ ಬಗ್ಗೆ ಜಾಗೃತಿ ಹೆಚ್ಚಿಸಿ.

ಹಂದಿ ಜ್ವರವನ್ನು ತರುತ್ತಿರುವ ಹಂದಿ(?)ಗಳ ಬಗ್ಗೆ ಎಚ್ಚರ!!

ಏನಿದು ಹಂದಿ ಜ್ವರ? ಅದು ಭಾರತಕ್ಕೆ ಬರುತ್ತಿದೆಯಾ? ಇದು ಸಾವಿಗೆ ಕಾರಣವಾಗುತ್ತಿದೆಯಾ? ಇದಕ್ಕೆ ಬಡ ಹಂದಿಗಳು ಕಾರಣವೇ? ಹಂದಿ ಮಾಂಸ ತಿನ್ನುವುದರಿಂದ ಬರುತ್ತಾ? ಇದು ಇದ್ದಕ್ಕಿದ್ದ ಹಾಗೆ ಹೇಗೆ ಪ್ರಾರಂಭವಾಯಿತು? ಹೀಗೆ ಹಲವಾರು ಪ್ರಶ್ನೆಗಳು ನಿಮಗೆ ಕಾಡುತ್ತಿರಬಹುದು.

ಇದಕ್ಕೆ ಹಂದಿ ಜ್ವರವೆಂದು ಕರೆಯುವುದನ್ನು ಪ್ರತಿಭಟಿಸಿರುವುದರಿಂದ ಹಿಂದಕ್ಕೆ ತೆಗೆದುಕೊಳ್ಳಲಾಗಿದ್ದು, ಈಗ ಸ್ವೈನ್ ಫ್ಲೂ ಎಂದು ಕರೆಯುತ್ತಿದ್ದರೂ ಅದು ಮಾಮೂಲಿಯಂತೆ ಇನ್ ಫ್ಲುಯನ್ ಝಾ(Influenza) ಫ್ಲೂ ಆಗಿದೆ. ಫ್ಲೂ ಜ್ವರದಲ್ಲೇ ಇದೊಂದು ಮಾದರಿಯಾಗಿದ್ದು, ಹೆಚ್೧ ಎನ್೧ ವೈರಸ್ ನಿಂದ ಹರಡುತ್ತದೆ. ಆದರೆ ಇದಕ್ಕೆ ಇಷ್ಟೊಂದು ವ್ಯವಸ್ಥಿತ ಪ್ರಚಾರ ಯಾಕೆ ಪಡೆಯುತ್ತಿದೆ? ಇದರ ಹಿಂದಿರುವ ಮನುಷ್ಯ-ಹಂದಿಗಳ ಬಗ್ಗೆ ಎಚ್ಚರವಾಗಿರಿ.

ಫ್ಲೂ ಗೆ ಕಂಡು ಹಿಡಿದಿರುವ ವ್ಯಾಕ್ಸಿನ್ ವ್ಯಾಪಾರವನ್ನು ವೃದ್ಧಿಸಲು ಇದೊಂದು ಕುತಂತ್ರದ ಪ್ರಚಾರವಾಗಿದೆ. ಇದಕ್ಕಾಗಿ ಅಮೆರಿಕಾ ಸರ್ಕಾರ ನೇಮಿಸಿದ “ಎಡ್ವೈಸರಿ ಕಮಿಟಿ ಆನ್ ಇಮ್ಯುನೈಸೇಷನ್ ಪ್ರಾಕ್ಟಿಸಸ್(ACIP)” ಯಾರು ವ್ಯಾಕ್ಸಿನೇಷನ್ ಮಾಡಿಸಿಕೊಳ್ಳಬೇಕೆಂದು ಸೂಚಿಸುತ್ತದೆ. ೧೯೯೯-೨೦೦೦ ರಲ್ಲಿ ೬೫ ವರ್ಷದ ಮೇಲ್ಪಟ್ಟವರು ವ್ಯಾಕ್ಸಿನೇಷನ್ ಮಾಡಿಸಿಕೊಳ್ಳಬೇಕೆಂದು ಸೂಚಿಸಿದಾಗ ೭೪ ಮಿಲಿಯನ್ ಜನರು ವ್ಯಾಕ್ಸಿನೇಷನ್ ಮಾಡಿಸಿಕೊಂಡರು. ೨೦೦೦-೨೦೦೧ ರಲ್ಲಿ ಈ ವಯಸ್ಸನ್ನು ೬೫ ರಿಂದ ೫೦ ಕ್ಕೆ ಇಳಿಸಲಾಯಿತು. ಆಗ ೪೧ ಮಿಲಿಯ ಜನರು ಅಧಿಕವಾಗಿ ಸೇರಿಕೊಂಡಂತಾಯಿತು. ೨೦೦೨-೦೩ ಆರೋಗ್ಯವಂತ ೬ ರಿಂದ ೨೩ ತಿಂಗಳ ಮಕ್ಕಳನ್ನೂ, ೨೦೦೪-೦೫ ರಲ್ಲಿ ಐದು ವರ್ಷದೊಳಗಿನ ಮಕ್ಕಳನ್ನೂ ಸೇರಿಸಲಾಯಿತು. ೨೦೦೮-೦೯ ರಲ್ಲಿ ೬ ತಿಂಗಳಿಂದ ೧೮ ವರ್ಷದೊಳಗಿನ ಆರೋಗ್ಯವಂತ ಮಕ್ಕಳನ್ನೂ ಸೇರಿಸಿದ ಈ ಸಮಿತಿ, ಅಮೆರಿಕಾದ ೮೪% ಜನ ವ್ಯಾಕ್ಸಿನೇಷನ್ ಗೆ ಒಳಪಡುವಂತೆ ಮಾಡಿತು. ಈ ವರ್ಷದ ಫ್ಲೂ ಸೀಸನ್ ನಲ್ಲಿ ಔಷಧಿ ಕಂಪನಿಗಳು ಅಮೆರಿಕಾದಲ್ಲಿ ೧೪೬ ಮಿಲಿಯನ್ ಜನರಿಗೆ ವ್ಯಾಕ್ಸಿನೇಷನ್ ಮಾಡಿ ಒಳ್ಳೆಯ ವ್ಯಾಪರವನ್ನು ಮಾಡಿದವು.

ಈ ಸಮಿತಿಯಲ್ಲಿರುವ ಹೆಚ್ಚುಕಮ್ಮಿ ಎಲ್ಲ ಸದಸ್ಯರಿಗೂ ವ್ಯಾಕ್ಸಿನೇಷನ್ ಉತ್ಪಾದಿಸುವ ಸಂಸ್ಥೆಗಳೊಂದಿಗೆ ಹಣಕಾಸಿನ ಸಂಪರ್ಕವಿರುವುದು ಸ್ಪಷ್ಟವಾಗಿದೆ.

ಈಗ ಅಮೆರಿಕಾ ಮಾರುಕಟ್ಟೆಯಿಂದ ಭಾರತವೂ ಸೇರಿ ಜಗತ್ತಿನ ಮಾರುಕಟ್ಟೆಗೆ ಲಗ್ಗೆ ಇಡಲು ಈ ವ್ಯಾಕ್ಸಿನೇಷನ್ ಕಂಪನಿಗಳು ಸಿದ್ಧತೆ ನಡೆಸುತ್ತಿವೆ. ಈ ಪ್ರಚಾರದ ಪ್ರಕ್ರಿಯೆಯ ಅಂಗವೇ “ಹಂದಿ ಜ್ವರ”. ಜನರಲ್ಲಿ ಭಯವನ್ನು ಉತ್ಪಾದನೆ ಮಾಡಿ ವ್ಯಾಕ್ಸಿನೇಷನ್ ವ್ಯಾಪಾರ ವೃದ್ಧಿಸುವುದೇ ಇದರ ಉದ್ದೇಶ. ಅಮೆರಿಕಾದಂಥ ವಿದ್ಯಾವಂತ ಜನರಿಗೇ ಮೋಸ ಮಾಡಬಹುದಾದರೆ, ಭಾರತದ ಜನರಿಗೆ ಮೋಸ ಮಾಡುವುದು ಸುಲಭವೆಂದು ಹೇಳಬಹುದು. ಅಮೆರಿಕಾ ಅಧ್ಯಕ್ಷ ಓಬಾಮಾರವರೇ ಇದಕ್ಕೆ ಸ್ವರ ಸೇರಿಸಿರಬೇಕಾದರೆ, ನಮ್ಮ ದೇಶದ ರಾಜಕಾರಣಿಗಳಿಗೆ ದಾರಿ ಇನ್ನೂ ಸುಲಭವೆಂದು ಹೇಳಬಹುದು. ಆದ್ದರಿಂದ ವ್ಯಾಕ್ಸಿನೇಷನ್ ತೆಗೆದುಕೊಳ್ಳಲು ಸಿದ್ಧರಾಗಿ!!

ಪ್ರತಿ ವರ್ಷವೂ ಇನ್ ಫ್ಲುಯನ್ ಝಾ ಮತ್ತು ಬ್ಯಾಕ್ಟಿರಿಯ ನ್ಯೂಮೇನಿಯಾ ಜ್ವರದಿಂದ ಸಾವಿರಾರು ಜನರು ಸಾಯುತ್ತಿದ್ದು, ಇವರು ಕೊಡುವ ಅಂಕಿ-ಅಂಶಗಳು ಯಾವ ಜ್ವರದಿಂದ ಸತ್ತಿದ್ದಾರೆಂದು ಸ್ಪಷ್ಟವಾಗುತ್ತಿಲ್ಲ ಮತ್ತು ಗೊಂದಲಕ್ಕೆ ಎಡೆಮಾಡಿಕೊಟ್ಟಿದೆ.

ವಯಸ್ಸಾದವರಲ್ಲಿ ವ್ಯಾಕ್ಸಿನೇಷನ್ ತೆಗೆದುಕೊಳ್ಳುವುದು ೧೫% ರಿಂದ ೬೫% ಕ್ಕೆ ಏರಿದರೂ, ಇನ್ ಫ್ಲುಯನ್ ಝಾ ಫ್ಲೂ ಇಂದ ಸಾಯುವವರ ಸಂಖ್ಯೆ ಕಡಿಮೆಯಾಗಿಲ್ಲವೆಂದು ೨೦೦೮ರಲ್ಲಿ ನಡೆಸಿದ ಸಮೀಕ್ಷೆಯಿಂದ ತಿಳಿದುಬಂದಿದೆ. ೨೬೦೦೦೦ ಮಕ್ಕಳಲ್ಲಿ ವ್ಯವಸ್ಥಿತವಾಗಿ ಮಾಡಿದ ೫೧ ಅಧ್ಯಯನದಲ್ಲಿ ವ್ಯಾಕ್ಸಿನೇಷನ್ ನಿಂದಾದ ಪ್ಲಾಸೆಬೋ ಪರಿಣಾಮ ಬಿಟ್ಟರೆ ಯಾವುದೇ ರೀತಿ ಪರಿಣಾಮಕಾರಿಯಾಗಿರುವುದಕ್ಕೆ ಆಧಾರವಿಲ್ಲವೆಂಬ ತೀರ್ಮಾನಕ್ಕೆ ಬಂದಿದೆ. ವ್ಯಾಕ್ಸಿನೇಷನ್ ತೆಗೆದುಕೊಳ್ಳದವರಲ್ಲಿ ೩% ಜನರಿಗೆ ಇನ್ ಫ್ಲುಯನ್ ಝಾ ಫ್ಲೂ ಬಂದರೆ, ವ್ಯಾಕ್ಸಿನೇಷನ್ ತೆಗೆದುಕೊಡವರಲ್ಲಿ ೨% ಜನರಲ್ಲಿ ಇನ್ ಫ್ಲುಯನ್ ಝಾ ಫ್ಲೂ ಬಂದಿದೆ. ಕೇವಲ ೧% ವ್ಯತ್ಯಾಸ ಗಮನಾರ್ಹವಲ್ಲ. ಆದರೆ ಔಷಧಿ ಕಂಪನಿಗಳು ಅದನ್ನು ೫೦% ಸಾಧನೆಯೆಂದು ಬೊಗಳೆ ಹೊಡೆಯುತ್ತಿದ್ದಾರೆ. ೧೦೦ ರಲ್ಲಿ ಒಬ್ಬನಿಗೆ ಲಾಭವಾಗುವುದು, ವೈದ್ಯಕೀಯ ಭಾಷೆಯಲ್ಲಿ ಗಮನಕ್ಕೆ ತೆಗೆದುಕೊಳ್ಳುವಂತದಲ್ಲ. ೧೦೦ ರಲ್ಲಿ ಒಬ್ಬನಿಗೆ ಲಾಭವಾಗಿ, ಇಬ್ಬರು ಇನ್ ಫ್ಲುಯನ್ ಝಾ ಫ್ಲೂ ದಾಳಿ ಇಡುತ್ತದೆ.

Formaldehyde ನ್ನು ವೈರಸ್ ನಿಷ್ಕ್ರಿಯಗೊಳಿಸಲು ಉಪಯೋಗಿಸಲಾಗುತ್ತಿದ್ದು, ಇದು ಕ್ಯಾನ್ಸರ್ ಗೆ ಕಾರಣವಾಗುವುದೆಂದು ಗುರುತಿಸಲಾಗಿದೆ. ಇದರಲ್ಲಿ ಉಪಯೋಗಿಸುವ Triton X-100 (a detergent), Polysorbate 80, carbolic acid, ethylene glycol (antifreeze), gelatin, and various antibiotics –neomycin, streptomycin, and gentamicin – ಕೆಲವು ಜನರಲ್ಲಿ ಅಲರ್ಜಿಯನ್ನು ಉಂಟುಮಾಡಬಹುದು.

ಕೆಲವೊಮ್ಮ ಫ್ಲೂ Alzheimer’s ಕಾಯಿಲೆಗೆ ಗುರಿಮಾಡುತ್ತದೆ ಎಂಬುದಕ್ಕೆ ಆಧಾರವಿದೆ. ವ್ಯಾಕ್ಸಿನೇಷನ್ ನಲ್ಲಿರುವ ಮೆರ್ಕುರಿ, ಅಲ್ಯೂಮೀನಿಯಂ ಮತ್ತು Formaldehyde ಜೊತೆ ಸಂಯುಕ್ತಗೊಳ್ಳುವುದೇ ಇದಕ್ಕೆ ಕಾರಣವೆಂದು ಕೆಲವರ ಅಭಿಪ್ರಾಯ. Alzheimer’s ಕಾಯಿಲೆಗೆ ಗುರಿಯಾಗುವವರು ವ್ಯಾಕ್ಸಿನೇಷನ್ ಪಡೆದವರಲ್ಲಿ ೧೦ ಪಟ್ಟು ಜಾಸ್ತಿ ಎಂಬುದು ಅಧ್ಯಯನದಿಂದ ತಿಳಿದುಬಂದಿದೆ.

ಆದ್ದರಿಂದ ಇನ್ನೇನು ಮಾರುಕಟ್ಟೆಗೆ ಲಗ್ಗೆ ಇಡಲಿರುವ ಈ ವ್ಯಾಕ್ಸಿನೇಷನ್ ಉಪಯೋಗ ಸಾಬೀತಾಗದಿರುವುದು ಮಾತ್ರವಲ್ಲ, ಅಪಾಯಕಾರಿಯೂ ಆಗಿದೆ.

ಚಳಿಗಾಲದಲ್ಲಿ ಸಾವಿಗೆ ಕಾರಣವಾಗುವುದು ಇನ್ಫ್ಲೆನ್ ಝಾ ಫ್ಲೂ ವೈರಸ್ ಗಿಂತ ವಿಟಾಮಿನ್ “ಡಿ” ಕೊರತೆಯಿಂದ ಉಂಟಾಗುತ್ತದೆ ಎಂದು ತಜ್ಞರ ಅಭಿಪ್ರಾಯವಾಗಿದೆ. ಆದ್ದರಿಂದ ನುರಿತ ವೈದ್ಯರ ಸಲಹೆ ಪಡೆದು ಸರಿಯಾದ ಪ್ರಮಾಣದಲ್ಲಿ “ವಿಟಾಮಿನ್ ಡಿ” ತೆಗೆದುಕೊಂಡರೆ ಸಾವಿನಿಂದ ಪಾರಾಗಬಹುದು. ವ್ಯಾಸ್ಕಿನೇಷನ್ ತೆಗೆದುಕೊಳ್ಳುವುದಕ್ಕಿಂತ “ವಿಟಾಮಿನ್ ಡಿ” ಮಾತ್ರೆಗಳನ್ನು ತೆಗೆದುಕೊಳ್ಳುವುದು ಕ್ಷೇಮಕರ ಮತ್ತು ಇನ್ ಫ್ಲುಯನ್ ಝಾ ಫ್ಲೂ ವನ್ನು ತಡೆಗಟ್ಟಬಹುದು.

ಹಂದಿ ಜ್ವರಕ್ಕಿಂತ ಈ ತರಹದ ಮನುಷ್ಯ-ಹಂದಿಗಳ ಬಗ್ಗೆ ನಾವು ಎಚ್ಚರದಿಂದಿರಬೇಕಾಗುತ್ತದೆ. ಇವರು ವ್ಯಾಪಾರಕ್ಕಾಗಿ ಯಾವುದೇ ಕೀಳುಮಟ್ಟಕ್ಕೆ ಇಳಿಯಲು ಸಿದ್ಧರಾಗಿರುತ್ತಾರೆ. ಜನರ ಜೀವವನ್ನು ಬಲಿಕೊಡಲು ಹಿಂದೆ ಮುಂದೆ ನೋಡದ ಈ ಹಂದಿಗಳೇ ಹೆಚ್ಚು ಅಪಾಯಕಾರಿ. ಇವರಿಗೆ ಹಣಕ್ಕಾಗಿ ಜೊಲ್ಲು ಸುರಿಸುವ ಭ್ರಷ್ಟ ಅಧಿಕಾರಿಗಳು, ಭ್ರಷ್ಟ ರಾಜಕಾರಣಿಗಳು, ಭ್ರಷ್ಟ ವೈದ್ಯ ಸಮೂಹದ ಬೆಂಬಲವಿರುವುದರಿಂದ ಈ ಸತ್ಯದ ಪ್ರಚಾರ ಕಷ್ಟ. “ಗಣಪತಿ ಹಾಲು ಕುಡಿದ” ಎಂದು ಎರಡೇ ದಿನದಲ್ಲಿ ಪ್ರಚಾರ ಮಾಡಿದ ಈ ದೇಶದ ಟಿವಿ, ಪತ್ರಿಕೆಗಳಿಗೆ “ಹಂದಿ ಜ್ವರ” ದ ಭಯವನ್ನು ಪ್ರಚಾರ ಮಾಡಿ ವ್ಯಾಕ್ಸಿನೇಷನ್ ವ್ಯಾಪಾರದ ಔಷಧಿ ಕಂಪನಿಗಳಿಗೆ ಸಹಾಯ ಮಾಡಲು ಕಷ್ಟವಾಗಲಾರದೆಂದು ಅನ್ನಿಸುತ್ತದೆ. ಜನ ಸುಳ್ಳನ್ನು ಸುಲಭವಾಗಿ ನಂಬುತ್ತಾರೆ, ಸತ್ಯವನ್ನು ನಂಬಲಾರರು. ಆದರೂ ಸ್ವಯಂಸೇವಾ ಸಂಸ್ಥೆಗಳು, ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಬಹುದು.

Share This