ಗೆಳೆಯರೇ,

ಗುಬ್ಬಚ್ಚಿಗಳು ಚಿತ್ರವು ಧ್ವನಿ ಮಿಶ್ರಣವನ್ನು ಮುಗಿಸಿಕೊಂಡಿದೆ. ನೋಡುತ್ತಾ… ನೋಡುತ್ತಾ… ಆರು ತಿಂಗಳುಗಳೇ ಉರುಳಿವೆ ಮತ್ತು ನನ್ನ ಗುಬ್ಬಚ್ಚಿಗಳು ರೆಕ್ಕೆ ಬಲಿತು ಹಾರಲು ತಯಾರಾಗಿ ನಿಂತಿವೆ. ಮರಿಗಳು ಮುದ್ದಾಗಿವೆ. ಇನ್ನೇನು ಕೆಲವೇ ದಿನಗಳಲ್ಲಿ ನಿಮ್ಮ ಮನೆಯಂಗಳಕ್ಕೆ ಹಾರಿ ಬಂದು ನಿಮ್ಮ ಕಿಟಕಿಯ ಮೇಲೆ ಕೂರಲಿವೆ. ಅವನ್ನು ನೋಡಿ ನಿಮ್ಮ ಮನಕ್ಕಿಷ್ಟು ಮುದ ಸಿಗುತ್ತದೆ ಎಂಬ ಆಶಯ ನನ್ನದು ಮತ್ತು ನನ್ನ ತಂಡದ್ದು… ನಾಳೆ ರಾತ್ರಿ ನಾನು ಹಾಗೂ ಕ್ಯಾಮರಾಮ್ಯಾನ್ ವಿಕ್ರಂ ಶ್ರೀವಾಸ್ತವ, ಚೆನ್ನೈ ಪ್ರಸಾದ್ ಲ್ಯಾಬ್‍ನಲ್ಲಿ ವರ್ಣ ಸಂಸ್ಕರಣಕ್ಕಾಗಿ ಹೋಗುತ್ತಿದ್ದೇವೆ. ಹಾಗಾಗಿ ಇನ್ನೊಂದು ವಾರ ಬ್ಲಾಗು ಬರಹದಿಂದ ನಾನು ದೂರ. ಆದಷ್ಟು ಬೇಗ ಮತ್ತೆ ಸಿಗೋಣ…

ಇಂತು ನಿಮ್ಮವ
ಅಭಯ ಸಿಂಹ

Share This